ವಿಜ್ಞಾನ ಕಾಂಗ್ರೆಸ್ ಶತಮಾನೋತ್ಸವ

6

ವಿಜ್ಞಾನ ಕಾಂಗ್ರೆಸ್ ಶತಮಾನೋತ್ಸವ

Published:
Updated:

ನವದೆಹಲಿ (ಪಿಟಿಐ): ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಶತಮಾನೋತ್ಸವ ಕಾರ್ಯಕ್ರಮವು 2013ರ ಜನವರಿ 3ರಿಂದ 7ರವರೆಗೆ ಕೋಲ್ಕತ್ತದಲ್ಲಿ ನಡೆಯಲಿದ್ದು, ಪ್ರಧಾನಿ ಮನಮೋಹನ್ ಸಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಅಧ್ಯಕ್ಷರೂ ಆಗಿರುವ ಪ್ರಧಾನಿ, ಈ ಸಂದರ್ಭದಲ್ಲಿ ನೂತನ ವಿಜ್ಞಾನ ಮತ್ತು ತಂತ್ರಜ್ಞಾನ ಯೋಜನೆಗಳನ್ನು ಅನಾವರಣಗೊಳಿಸುವ ನಿರೀಕ್ಷೆ ಇದೆ.  ಈ ಅತ್ಯಂತ ದೊಡ್ಡ ರಾಷ್ಟ್ರೀಯ ವಿಜ್ಞಾನ ಕಾರ್ಯಕ್ರಮದ ಆತಿಥ್ಯವನ್ನು ಕೋಲ್ಕತ್ತ ವಿಶ್ವವಿದ್ಯಾನಿಲಯ ವಹಿಸಿಕೊಂಡಿದ್ದು,  ದೇಶ-ವಿದೇಶಗಳ ನೊಬೆಲ್ ಪುರಸ್ಕೃತ ವಿಜ್ಞಾನಿಗಳು ಮತ್ತು ಪ್ರಸಿದ್ಧ ವಿಜ್ಞಾನಿಗಳು ಸೇರಿದಂತೆ 10 ಸಾವಿರ ಪ್ರತಿನಿಧಿಗಳು ಭಾಗವಹಿಸುವ ಸಂಭವವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry