ಬುಧವಾರ, ಅಕ್ಟೋಬರ್ 16, 2019
28 °C

ವಿಜ್ಞಾನ ಕೌಶಲ ಪರೀಕ್ಷೆ

Published:
Updated:

ಪಿಯರ್ಸನ್ ಎಜುಕೇಶನ್ ಸರ್ವೀಸಸ್ ಇದೇ 22 ಹಾಗೂ 29ರಂದು ಎರಡನೇ ಅಖಿಲ ಕರ್ನಾಟಕ ವಿಜ್ಞಾನ ಕೌಶಲ ಪರೀಕ್ಷೆ ನಡೆಸಲಿದೆ.9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ 22ರಂದು ಹಾಗೂ 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ 29ರಂದು ಸಾಮಾನ್ಯ ವಿಜ್ಞಾನ ಹಾಗೂ ಬೌದ್ಧಿಕ ಸಾಮರ್ಥ್ಯದ ಪರೀಕ್ಷೆಗಳು ನಡೆಯಲಿವೆ.ಎಜುರೈಟ್ ಕಲಿಕಾ ಕೇಂದ್ರದ ಆಶ್ರಯದಲ್ಲಿ ನಡೆಯಲಿರುವ ಈ ಪರೀಕ್ಷೆಯು ಎಲ್ಲ ವಿದ್ಯಾರ್ಥಿಗಳಿಗೆ ಉಚಿತ. ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ ಹಾಗೂ ತುಮಕೂರು ಕೇಂದ್ರಗಳಲ್ಲೂ ಪರೀಕ್ಷೆ ನಡೆಯಲಿದೆ.

 

ಇಲ್ಲಿ ಉನ್ನತ ಸ್ಥಾನ ಗಳಿಸುವ ವಿದ್ಯಾರ್ಥಿಗಳು ಎಜ್ಯುರೈಟ್ ಲರ್ನಿಂಗ್ ಸೆಂಟರ್‌ನಲ್ಲಿ ಪರೀಕ್ಷಾ ಸಿದ್ಧತೆ ನಡೆಸಲು ಅಗತ್ಯವಾದ ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗುತ್ತಾರೆ. ಅತ್ಯುತ್ತಮ ಸಾಧನೆ ಮಾಡಿದವರನ್ನು ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರೊಂದಿಗೆ ಫೆಬ್ರುವರಿಯಲ್ಲಿ ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು. ನೋಂದಣಿ ಮತ್ತು ಮಾಹಿತಿಗೆ: 97400 18822.

Post Comments (+)