ವಿಜ್ಞಾನ ಜಗತ್ತಿಗೆ ಇನ್‌ಸ್ಪೈರ್

7

ವಿಜ್ಞಾನ ಜಗತ್ತಿಗೆ ಇನ್‌ಸ್ಪೈರ್

Published:
Updated:

ತುಮಕೂರು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ, ಟಿಟಿಐ ಕಾಲೇಜು ಹಾಗೂ ಎಂಪ್ರೆಸ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಈಚೆಗೆ ನಡೆದ `ಇನ್‌ಸ್ಪೈರ್~ ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಆಸಕ್ತಿ ಬೆಳೆಸುವಲ್ಲಿ ಯಶಸ್ವಿಯಾಯಿತು.ಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆವಿಷ್ಕಾರದ ಮನೋಭಾವ ಬೆಳೆಸುವ ಉದ್ದೇಶದಿಂದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ದೇಶದಾದ್ಯಂತ `ಇನ್‌ಸ್ಪೈರ್ ಅವಾರ್ಡ್~ ಕಾರ್ಯಕ್ರಮ ಜಾರಿ ಮಾಡಿದೆ. ಈ ಕಾರ್ಯಕ್ರಮ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಕನಸಿನ ಕೂಸು. ದೇಶದ ಎಲ್ಲ ಶಾಲೆಗಳೂ ಈ ಕಾರ್ಯಕ್ರಮದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪಾಲ್ಗೊಳ್ಳುವುದು ವಿಶೇಷ.ಬೆಂಗಳೂರು ನಗರ- ಗ್ರಾಮಾಂತರ, ತುಮಕೂರು, ಮಧುಗಿರಿ, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಮಂಡ್ಯ, ದಾವಣಗೆರೆ, ಮೈಸೂರು, ಚಾಮರಾಜನಗರ ಹಾಗೂ ಚಿತ್ರದುರ್ಗ ಸೇರಿದಂತೆ ಒಟ್ಟು 15 ಶೈಕ್ಷಣಿಕ ಜಿಲ್ಲೆಗಳನ್ನು ಒಳಗೊಂಡ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಿದ್ಧಪಡಿಸಿರುವ 954 ವಿಜ್ಞಾನ ಮಾದರಿಗಳು ಪ್ರದರ್ಶನಗೊಂಡವು. ವಿಜ್ಞಾನ ಆಸಕ್ತರು ಈ ಮಾದರಿಗಳನ್ನು ಕಂಡು ಹರ್ಷ ವ್ಯಕ್ತಪಡಿಸಿದರು.ವಿಜ್ಞಾನ ಮಾದರಿಯ ವೈಶಿಷ್ಟ್ಯತೆಯನ್ನು ನೋಡುಗರ ಮನ ಮುಟ್ಟುವಂತೆ ವಿವರಿಸುವಲ್ಲಿಯೂ ವಿದ್ಯಾರ್ಥಿಗಳು ಯಶಸ್ವಿಯಾದರು. ವಸ್ತು ಪ್ರದರ್ಶನದ ಮೊದಲ ದಿನ ಟಿಟಿಐ ಕಾಲೇಜು ಆವರಣದಲ್ಲಿ ವಿಜ್ಞಾನದ ಪ್ರಾತ್ಯಕ್ಷಿಕೆಗಳು ಎಲ್ಲರನ್ನೂ ಕೈಬೀಸಿ ಕರೆದು ಮಾಹಿತಿ ಉಣಬಡಿಸಿದವು. ರಾಕೆಟ್ ಉಡಾವಣಾ ಮಾದರಿ, ಸುನಾಮಿ ಮುನ್ಸೂಚನಾ ಮಾಪನ, ಪಕ್ಷಿಗಳ ಸಂತತಿಗೆ ಮೊಬೈಲ್ ಟವರ್ ಮಾರಕ, ನ್ಯಾನೋ ಚಿಕಿತ್ಸೆ ವೈಖರಿ ಇತ್ಯಾದಿ ಪ್ರಾತ್ಯಕ್ಷಿಕೆಗಳು ಗಮನ ಸೆಳೆದವು. ಹೆದ್ದಾರಿ      ಹಂಪ್ಸ್‌ಗಳಿಂದ ವಿದ್ಯುತ್ ತಯಾರಿಕೆ, ರಸ್ತೆ ಕಾಮಗಾರಿಗೆ ಪ್ಲಾಸ್ಟಿಕ್ ತ್ಯಾಜ್ಯ, ಸೌರಶಕ್ತಿ ಬಳಕೆ ಸೇರಿದಂಥೆ ಹಲವು ಉಪಯುಕ್ತ ಮಾಹಿತಿಯನ್ನು ಒದಗಿಸಿದವು.ಅಣುಸ್ಥಾವರಗಳ ಕಾರ್ಯವೈಖರಿ, ಹಳೆಯ ಸೈಕಲ್‌ಗಳನ್ನು ಯಾಂತ್ರಿಕ ಶಕ್ತಿಯಾಗಿ ಬಳಸಿ ನೀರೆತ್ತುವುದು, ಸೌರಶಕ್ತಿ ಸ್ನೇಹಿ ಮನೆಗಳು, ಪರಿಸರ ಸ್ನೇಹಿ ರೆಫ್ರಿಜರೇಟರ್, ಏತ ನೀರಾವರಿ ಯೋಜನೆ, ಸಾವಯವ ಪದ್ಧತಿ, ಶೂನ್ಯ ಕೃಷಿ ಪದ್ಧತಿ, ನೈಸರ್ಗಿಕ ಬೆಳೆ ಪದ್ಧತಿ, ರೈತನ ಮಿತ್ರ ಎರೆ ಹುಳು ಗೊಬ್ಬರ ಬಳಕೆಯ ಪ್ರಾತ್ಯಕ್ಷಿಕೆಗಳು ಹಲವರಿಗೆ ಮಾರ್ಗದರ್ಶಿ ಎನಿಸಿತು.ತುಮಕೂರು ಇನ್‌ಸ್ಪೈರ್ ವಿಜ್ಞಾನ ಪ್ರದರ್ಶನದಲ್ಲಿ ಪ್ರದರ್ಶಿತಗೊಂಡಿದ್ದ 954 ಮಾದರಿಗಳ ಪೈಕಿ 50 ಮಾದರಿಗಳನ್ನು ಅ. 21ರಿಂದ 23ರ ವರೆಗೆ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ `ಇನ್ಸ್‌ಸ್ಪೈರ್ ಅವಾರ್ಡ್~ ಪ್ರದರ್ಶನಕ್ಕೆ ಕಳುಹಿಸಲಾಗುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry