ವಿಜ್ಞಾನ ಪ್ರಪಂಚದಲ್ಲಿ...

1. ‘ವನರಾಜ’ ಎಂದೇ ಪ್ರಸಿದ್ಧವಾಗಿರುವ ವನ್ಯಪ್ರಾಣಿ ‘ಸಿಂಹ’ ಚಿತ್ರ–1ರಲ್ಲಿದೆ. ಈ ಕೆಳಗಿನ ಯಾವ ರಾಷ್ಟ್ರಗಳಲ್ಲಿ ಸಿಂಹಗಳ ನೈಸರ್ಗಿಕ ನೆಲೆ ಇಲ್ಲ?
ಅ. ಭಾರತ
ಬ. ದಕ್ಷಿಣ ಆಫ್ರಿಕ
ಕ. ಕೆನಡ
ಡ. ತಾಂಜಾನಿಯಾ
ಇ. ಎಥಿಯೋಪಿಯಾ
ಇ. ಜಪಾನ್
ಉ. ಇಟಲಿ
ಟ. ಕೀನ್ಯಾ
ಣ. ಅರ್ಜಂಟೈನಾ
2. ಸ್ತನಿ ವರ್ಗಕ್ಕೆ ಸೇರಿದ, ದೈತ್ಯ ಗಾತ್ರಕ್ಕೆ ಹೆಸರಾದ, ಸಾಗರ ಜೀವಿಯಾದ ‘ತಿಮಿಂಗಿಲ’ವೊಂದು ಚಿತ್ರ–2ರಲ್ಲಿದೆ. ಇಲ್ಲಿರುವ ವಿಶಿಷ್ಟ ತಿಮಿಂಗಿಲಗಳನ್ನು ಹೆಸರಿಸಬಲ್ಲಿರಾ?
ಅ. ಅತ್ಯಂತ ದೈತ್ಯ ದೇಹದ ತಿಮಿಂಗಿಲ.
ಬ. ಬೆಳ್ಳನೆಯ ಶರೀರದ ತಿಮಿಂಗಿಲ.
ಕ. ಈಟಿಯಂಥ ‘ದಂತ’ವನ್ನು ಪಡೆದಿರುವ ತಿಮಿಂಗಿಲ.
ಡ. ಸಂಕೀರ್ಣ ಧ್ವನಿ ಸಂಭಾಷಣೆಗೆ ಹೆಸರಾದ ತಿಮಿಂಗಿಲ.
3. ಕ್ರಿಸ್ತಶಕ 1ನೆಯ ಶತಮಾನದ ವಿಶ್ವಪ್ರಸಿದ್ಧ ‘ನಾಗರಿಕತೆ’ಯೊಂದು ನಿರ್ಮಿಸಿದ್ದ ‘ಪಿರಮಿಡ್’ಸಹಿತ ನಗರ ‘ಟೈಕಲ್’ನ ಅವಶೇಷಗಳ ದೃಶ್ಯವೊಂದು ಚಿತ್ರ–3ರಲ್ಲಿದೆ. ಈ ದೃಶ್ಯವನ್ನೂ ಇಲ್ಲಿನ ಪಿರಮಿಡ್ನ ಸ್ವರೂಪವನ್ನೂ ಗಮನಿಸಿ ಆ ನಾಗರಿಕತೆ ಯಾವುದು ಗುರುತಿಸಿ:
ಅ. ಹರಪ್ಪಾ ನಾಗರಿಕತೆ (ಇಂಡಸ್ ವ್ಯಾಲೀ)
ಬ. ಈಜಿಪ್ಷಿಯನ್ ನಾಗರಿಕತೆ
ಕ. ಮಾಯನ್ ನಾಗರಿಕತೆ
ಡ. ಸುಮೇರಿಯನ್ ನಾಗರಿಕತೆ.
4. ವಿಶ್ವ ವಿಖ್ಯಾತ ವಿಜ್ಞಾನಿಗಳಿಬ್ಬರ ಭಾವ ಚಿತ್ರಗಳು ಚಿತ್ರ–5 ಮತ್ತು ಚಿತ್ರ–6ರಲ್ಲಿವೆ. ಈ ವಿಜ್ಞಾನಿಗಳನ್ನು ಈ ಪಟ್ಟಿಯಲ್ಲಿ ಗುರುತಿಸಬಲ್ಲಿರಾ?
ಅ. ಸರ್. ಸಿ.ವಿ. ರಾಮನ್
ಬ. ಚಾರ್ಲ್ಸ್ ಡಾರ್ವಿನ್
ಕ. ಸ್ಟೀಫನ್ ಹಾಕಿಂಗ್
ಡ. ಆಲ್ಬರ್ಟ್ ಐನ್ಸ್ಟೀನ್
ಇ. ಹೆನ್ರೀ ಬೆಕ್ವರಲ್
ಈ. ಐಸಾಕ್ ನ್ಯೂಟನ್
5. ಸರೀಸೃಪಗಳ ವರ್ಗಕ್ಕೆ ಸೇರಿದ, ಪ್ರಾಚೀನ ಕಾಲದಲ್ಲಿದ್ದ ಪ್ರಾಣಿಯೊಂದರ ಮೊಟ್ಟೆಗಳ ಪಳೆಯುಳಿಕೆ ಚಿತ್ರ–6ರಲ್ಲಿದೆ. ಆ ಪ್ರಾಣಿ ಇವುಗಳಲ್ಲಿ ಯಾವ ಗುಂಪಿಗೆ ಸೇರಿದ್ದು ನಿರ್ಧರಿಸಬಲ್ಲಿರಾ?
ಅ. ಅನಕೊಂಡಾ
ಬ. ಡೈನೋಸಾರ್
ಕ. ಕೊಮೊಡೋ ಡ್ರಾಗನ್
ಡ. ಕೇಮ್ಯಾನ್
6. ಬಂಡೆಯೊಂದರಲ್ಲಿ ಸ್ಪಷ್ಟವಾಗಿ ಅಚ್ಚಾಗಿರುವ ಸ್ಪರೂಪದ ಪಳೆಯುಳಿಕೆಯೊಂದು ಚಿತ್ರ–7ರಲ್ಲಿದೆ. ಇದು ಇಲ್ಲಿ ಹೆಸರಿಸಿರುವ ಯಾವ ಜೀವಿಯ ಅವಶೇಷ ಗುರುತಿಸಿ:
ಅ. ಕೀಟ
ಬ. ಮತ್ಸ್ಯ
ಕ. ಸರ್ಪ
ಡ. ಮೃದ್ವಂಗಿ
7. ಪ್ರಾಚೀನ ಅರಸನೊಬ್ಬ ತನ್ನ ಅಪರ ಬದುಕಿಗೆಂದು ತಯಾರು ಮಾಡಿಸಿ ನೆಲದಲ್ಲಿ ಹುದುಗಿಸಿದ್ದ ಮಣ್ಣಿನ ಸೈನಿಕರ–ಸೇನೆಯ ದೃಶ್ಯವೊಂದು ಚಿತ್ರ–8ರಲ್ಲಿದೆ. ಪ್ರಸ್ತುತ ವಿಶ್ವ ಪ್ರಸಿದ್ಧ ಪ್ರವಾಸೀ ಆಕರ್ಷಣೆಗಳಲ್ಲೊಂದಾಗಿರುವ ಈ ಮೃತ್ತಿಕಾ ಸೇನೆ ಯಾವ ರಾಷ್ಟ್ರದಲ್ಲಿದೆ?
ಅ. ಈಜಿಪ್್ಟ
ಬ. ಇರಾಕ್
ಕ. ಟರ್ಕಿ
ಡ. ಮೆಕ್ಸಿಕೋ
ಇ. ಚೀನಾ
ಈ. ಜಪಾನ್
8. ಧರೆಯ ಒಂದು ವಿಶಿಷ್ಟ ವಾಯುಗುಣ ಪ್ರದೇಶವಾದ ‘ತಂಡ್ರಾ’ದ ಒಂದು ದೃಶ್ಯ ಚಿತ್ರ–9ರಲ್ಲಿದೆ. ತಂಡ್ರಾ ಪ್ರದೇಶದ ವಿಶೇಷ ಲಕ್ಷಣಗಳ–ಗುಣಗಳ ಈ ಪಟ್ಟಿಯಲ್ಲಿ ಯಾವುದು ಗುಂಪಿಗೆ ಸೇರಿಲ್ಲ?
ಅ. ಅಲ್ಲಿ ವರ್ಷವಿಡೀ ವಿಪರೀತ ಚಳಿ.
ಬ. ಅಲ್ಲಿನ ಮಳೆ ಪ್ರಮಾಣ ಬಹಳ ಕಡಿಮೆ.
ಕ. ಅದು ವೃಕ್ಷ ರಹಿತ ಪ್ರದೇಶ.
ಡ. ಸಸ್ಯಾಹಾರಿ ಪ್ರಾಣಿಗಳು ಅಲ್ಲಿ ಒಂದೂ ಇಲ್ಲ.
ಇ. ವೇಗದಿಂದ ಬೀಸುತ್ತಲೇ ಇರುವ ಗಾಳಿ ಅಲ್ಲಿ ಸದಾಕಾಲ.
9. ಚಿತ್ರ–10ರಲ್ಲಿರುವ ನಿರ್ಮಿತಿಯನ್ನು ಗಮನಿಸಿ. ಈ ನಿರ್ಮಾಣ ಏನೆಂದು ಗುರುತಿಸಬಲ್ಲಿರಾ?
ಅ. ಲವಣ ಜಲ ಶುದ್ಧೀಕರಣ ಘಟಕ
ಬ. ತೈಲ–ಅನಿಲ ಭಾವಿ
ಕ. ತೈಲ ಸಂಗ್ರಹಾಗಾರ
ಡ. ತೈಲ ಸಂಸ್ಕರಣಾ ಘಟಕ
10. ವಿಶಿಷ್ಟ ಗೂಡು ನಿರ್ಮಿಸಿ ಮರಿಗಳಿಗೆ ಆಹಾರ ನೀಡುತ್ತಿರುವ ಪ್ರಸಿದ್ಧ ಪಕ್ಷಿ ಚಿತ್ರ–11ರಲ್ಲಿದೆ. ಈ ಹಕ್ಕಿಯ ಹೆಸರೇನು?
ಅ. ಮರಕುಟುಕ
ಬ. ಹಾರ್ನ್ಬಿಲ್
ಕ. ಜೇನ್ನೊಣ ಭಕ್ಷಕ
ಡ. ನೊಣ ಹಿಡುಕ
11. ಸಪ್ತವರ್ಣಗಳ ಸುಂದರ ‘ಮಳೆ ಬಿಲ್ಲು’ ಚಿತ್ರ–12ರಲ್ಲಿದೆ. ‘ಚಂದ್ರ’ನಲ್ಲಿ ಮಳೆಬಿಲ್ಲು ಎಂದೂ ಮೂಡುವುದಿಲ್ಲ. ಅದಕ್ಕೆ ಕಾರಣ ಏನು?
ಅ. ಅಲ್ಲಿ ಮಳೆ ಬೀಳುವುದಿಲ್ಲ.
ಬ. ಅಲ್ಲಿ ಸೂರ್ಯೋದಯ–ಸೂರ್ಯಾಸ್ತ ಧರೆಯಲ್ಲಿರುವಂತೆ ಇಲ್ಲ.
ಕ. ಅಲ್ಲಿ ನೀರಾವಿ ಸಹಿತ ವಾಯುಮಂಡಲವೇ ಇಲ್ಲ.
ಡ. ಚಂದ್ರ ಒಂದು ಮೃತ ಕಾಯ.
12. ಮರಳಲ್ಲಿ ಗುಳಿತೋಡಿ ಮೊಟ್ಟೆಗಳನ್ನಿಡಲು ಬರುತ್ತಿರುವ ಮೊಟ್ಟೆಗಳನ್ನಿಟ್ಟು ಹಿಂದಿರುಗುತ್ತಿರುವ ‘ಕಡಲಾಮೆ ಪ್ರವಾಹ’ ಚಿತ್ರ–13ರಲ್ಲಿದೆ. ಜಗತ್ತಿನ ಕೆಲವೇ ನಿರ್ದಿಷ್ಟ ಕಡಲಂಚುಗಳಲ್ಲಿ ಪ್ರತಿ ವರ್ಷ ನಡೆವ ವಿದ್ಯಮಾನ ಇದು. ನಮ್ಮ ದೇಶದ ಯಾವ ರಾಜ್ಯದಲ್ಲಿ ಈ ವಿದ್ಯಮಾನ ಭಾರೀ ಪ್ರಮಾಣದಲ್ಲಿ ಪ್ರತಿ ವರ್ಷ ಸಂಭವಿಸುತ್ತದೆ, ಗೊತ್ತೇ?
ಅ. ಕೇರಳ
ಬ. ಕರ್ನಾಟಕ
ಕ. ತಮಿಳುನಾಡು
ಡ. ಒರಿಸ್ಸಾ
ಇ. ಮಹಾರಾಷ್ಟ್ರ
13. ಹೊಂದಿಸಿ ಕೊಡಿ:
1. ಆಲಿವ್ ರಿಡ್ಲೀ ಅ. ಮೃದ್ವಂಗಿ
2. ಕೊಕ್ಯಾಟೋ ಬ. ಸರ್ಪ
3. ಗೀಲಾ ಮಾನ್ಸ್ಟರ್ ಕ. ಹಕ್ಕಿ
4. ನಾಟಿಲಸ್ ಡ. ಬಿಲವಾಸಿ
5. ಮಾಂಬಾ ಇ. ಕಡಲಾಮೆ
6. ಪ್ರೇರೀ ನಾಯಿ ಈ. ಹಲ್ಲಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.