ವಿಜ್ಞಾನ ಬೆಳೆದರೂ ಅಜ್ಞಾನ ಹೋಗಿಲ್ಲ

7

ವಿಜ್ಞಾನ ಬೆಳೆದರೂ ಅಜ್ಞಾನ ಹೋಗಿಲ್ಲ

Published:
Updated:

ಬೆಳಗಾವಿ: ಓ ಎನ್ನ ದೇಶ ಬಾಂಧವರೆ... (ಹೇ ಮೇರೆ ವತನಕೆ ಲೋಗೋ) ಹಾಡು ಕೇಳಿ ಬರುತ್ತಿದ್ದರೆ ಆಲಿಸಲು ಕುಳಿತಿದ್ದವರ ಮನದಲ್ಲಿ ದೇಶಭಕ್ತಿ, ಕಣ್ಣೀನಂಚಿನಲಿ ನೀರು ಹರಿದಾಡಿತು.ಧಾರವಾಡ ಆಕಾಶವಾಣಿ ವತಿಯಿಂದ ಭಾನುವಾರ ನಗರದ ಬಿ.ಎಸ್. ಜೀರಗೆ ಸಭಾಭವನದಲ್ಲಿ ಹಮ್ಮಿಕೊಂಡಿರುವ `ಆಕಾಶವಾಣಿ ಹಬ್ಬ~ ಕಾರ್ಯಕ್ರಮದಲ್ಲಿ ಹೇ ಮೇರೆ ವತನಕೆ ಲೋಗೋ ಹಾಡನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ರಾಘವೇಂದ್ರ ಇಟಗಿ ಅವರ ಹಾಡು ಅಲೆ, ಅಲೆಯಾಗಿ ಕೇಳಿ ಬಂದಿತು.ಕವಿ ಎಸ್.ಡಿ. ಇಂಚಲ ಅವರ `ಬನ್ನಿ ಓ ಬಾಂದವರೇ... ಹಾಗೂ ರಾಷ್ಟ್ರಕವಿ ಕುವೆಂಪು ಅವರ ಓ ನನ್ನ ಚೇತನ, ಆಗು ನೀ ಅನಿಕೇತನ.. ಹಾಡುಗಳು ಪ್ರೇಕ್ಷಕರ ಮನ ಗೆದ್ದವು. ಪಂ. ರಘುನಾಥ ನಾಕೋಡ ಹಾಗೂ ಡಾ. ರವಿಕಿರಣ ನಾಕೋಡ ಅವರ ತಬಲಾ ವಾದನವೂ ಜನರನ್ನು ರೋಮಾಂಚನಗೊಳಿಸಿತು.ಆಕಾಶವಾಣಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿದ ಸ್ವಾತಂತ್ರ್ಯಯೋಧ ಸೋಮಲಿಂಗಪ್ಪ ಮಳಗಲಿ ಮಾತನಾಡಿ, 1924ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಮಹಾತ್ಮಾಗಾಂಧೀಜಿಯವರೇ, ಬೆಳಗಾವಿ ಕರ್ನಾಟಕದ್ದು ಎಂದಿದ್ದಾರೆ. ಇದು ಎಂದೆಂದೂ ಕರ್ನಾಟಕದ್ದಾಗಿದೆ ಎಂದರು.`ದೇಶದಲ್ಲಿ ವಿಜ್ಞಾನ ಬೆಳೆದಿದೆ. ಆದರೆ ಅಜ್ಞಾನ ಹೋಗಿಲ್ಲ. ಅಜ್ಞಾನವನ್ನು ಹೋಗಲಾಡಿಸುವ ಕೆಲಸ ಆಗಬೇಕಿದೆ~ ಎಂದು ಅವರು ಹೇಳಿದರು.`ರೇಡಿಯೋ ಜನ ಜಾಗೃತಿಯ ಮಾಧ್ಯಮವಾಗಿದೆ. ಟಿ.ವಿ.ಯಿಂದಾಗಿ ಸೃಜನಶೀಲತೆ ಹೋಗಿದೆ. ಮಕ್ಕಳ ಮೇಲೆ ದುಷ್ಟರಿಣಾಮ ಬೀರುತ್ತಿದೆ~ ಎಂದು ಕಳವಳ ವ್ಯಕ್ತಪಡಿಸಿದರು.ಹಿರಿಯ ಸಾಹಿತಿ ಚಂದ್ರಕಾಂತ ಕುಸನೂರ ಮಾತನಾಡಿ, ಹೊರಗಡೆ ಪ್ರದರ್ಶಿಸುವ ಹಳೆಯ ಭಾವಚಿತ್ರಗಳು ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿಗಳಾಗಿವೆ ಎಂದರು. ಪಿ.ಎಫ್. ಕೋಟೂರ, ಸಿ.ಯು. ಬೆಳ್ಳಕ್ಕಿ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry