ವಿಜ್ಞಾನ ವಸ್ತುಪ್ರದರ್ಶನ: ರಾಷ್ಟ್ರಮಟ್ಟಕ್ಕೆ ಆಯ್ಕೆ

7

ವಿಜ್ಞಾನ ವಸ್ತುಪ್ರದರ್ಶನ: ರಾಷ್ಟ್ರಮಟ್ಟಕ್ಕೆ ಆಯ್ಕೆ

Published:
Updated:

ಹೂವಿನಹಡಗಲಿ (ಬಳ್ಳಾರಿ ಜಿಲ್ಲೆ): ತಾಲ್ಲೂಕಿನ ಮಾನ್ಯರಮಸಲವಾಡದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವಿ.ಮಂಜು ನಾಯ್ಕ ತಯಾರಿಸಿದ ~ವಿದ್ಯುತ್ ಉಳಿತಾಯ ಗ್ರಾಮ~ ಎಂಬ ಮಾದರಿ ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದಶನಕ್ಕೆ ಆಯ್ಕೆಯಾಗಿದೆ.ಉ.ಕ. ಜಿಲ್ಲೆಯ ಕುಮಟಾದಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಈ ಮಾದರಿ ಆಯ್ಕೆಯಾಗಿದೆ. ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಭಾಗವಹಿಸುವ ಅವಕಾಶವನ್ನು ಮಂಜು ನಾಯ್ಕ ಪಡೆದು ಕೊಂಡಿದ್ದಾನೆ.

ದ್ಯುತಿ ವಿದ್ಯುತ್ ಪರಿಣಾಮ ತತ್ವದ ಆಧಾರದಅಡಿಯಲ್ಲಿ ತಯಾರಿಸಲಾಗಿರುವ ಈ ಮಾದರಿ ಅತಿ ಕಡಿಮೆ ವೆಚ್ಚದ ಸಲಕರಣೆಗಳನ್ನು ಹೊಂದಿದೆ. 9 ವೋಲ್ಟ್ ಬ್ಯಾಟರಿ, ಎಲ್‌ಡಿಆರ್ ಸರ್ಕ್ಯೂಟ್, ಎಲ್‌ಇಡಿ ಬಲ್ಬ್, ತಾಮ್ರದ ತಂತಿ, ಹಾಗೂ ಕಟ್ಟಿಗೆ ಬಳಸಿ ಇದನ್ನು ತಯಾರಿಸಲಾಗಿದೆ.ಈ ಮಾದರಿಯಲ್ಲಿ ಬಳಸಿರುವ ಸರ್ಕಿಟ್, ಹಗಲಿನಲ್ಲಿ ಬೀದಿ ದೀಪ ಉರಿಯುವುದನ್ನು ಸ್ವಯಂ ಚಾಲಿತವಾಗಿ ನಿಯಂತ್ರಿಸುತ್ತದೆ. ರಾತ್ರಿ ಸಮಯದಲ್ಲಿ ಸ್ವಯಂ ಚಾಲಿತವಾಗಿ ಹೊತ್ತಿಕೊಳ್ಳುವಂತೆ ಮಾಡುತ್ತದೆ.ಬೀದಿ ದೀಪಗಳಿಂದ ಗ್ರಾಮಗಳಲ್ಲಿ ಅನವಶ್ಯಕವಾಗಿ ವಿದ್ಯುತ್ ಪೋಲಾಗುವುದನ್ನು ಈ ಮಾದರಿಯಿಂದ ಸುಲಭವಾಗಿ ನಿಯಂತ್ರಿಸಬಹುದು. ವಿದ್ಯುತ್ ಬರ ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ ಈ ಮಾದರಿ ಅವಶ್ಯಕವೆನ್ನಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry