ವಿಜ್ಞಾನ ವಿದ್ಯಾರ್ಥಿ ಯೋಜನೆ ಕಾರ್ಯಕ್ರಮ
ಬೆಂಗಳೂರು: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ 39 ನೇ ‘ವಿಜ್ಞಾನ ವಿದ್ಯಾರ್ಥಿ ಯೋಜನೆ ಕಾರ್ಯಕ್ರಮ’ವನ್ನು (ಸೈನ್ಸ್ ಪ್ರಾಜೆಕ್ಟ್) ಇದೇ 19 ಮತ್ತು 20 ರಂದು ವಿಜಯಪುರದಲ್ಲಿ ಏರ್ಪಡಿಸಿದೆ.
ಎರಡು ದಿನಗಳ ಈ ಕಾರ್ಯಕ್ರಮ ವಿಜಯಪುರದ ಹಳಕಟ್ಟಿ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ನಡೆಯಲಿದ್ದು, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸುವರು. ಈ ಸಾಲಿನ ಸೈನ್ಸ್ ಪ್ರಾಜೆಕ್ಟ್ ಕಾರ್ಯಕ್ರಮಕ್ಕೆ144 ಶೈಕ್ಷಣಿಕ ಸಂಸ್ಥೆಗಳಿಂದ 2,278 ಯೋಜನೆಗಳ (ಪ್ರಾಜೆಕ್ಟ್) ಪ್ರಸ್ತಾವನೆಗಳು ಬಂದಿವೆ.
ಐಐಎಸ್ಸಿ ಮತ್ತು ಇತರ ಸಂಶೋಧನಾ ಸಂಸ್ಥೆಗಳ ತಜ್ಞರು ಕೂಲಂಕಷ ಪರಿಶೀಲನೆ ನಡೆಸಿದ ಬಳಿಕ 130 ಎಂಜಿನಿಯರಿಂಗ್ ಕಾಲೇಜುಗಳ 568 ಪ್ರಾಜೆಕ್ಟ್ಗಳು ಆಯ್ಕೆ ಗೊಂಡಿವೆ ಎಂದು ಮಂಡಳಿ ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.