ವಿಜ್ಞಾನ ವಿಶ್ವ

7

ವಿಜ್ಞಾನ ವಿಶ್ವ

Published:
Updated:

1. ಭೂ ವಾಯುಮಂಡಲದಲ್ಲಿ, ಧ್ರುವಪ್ರದೇಶ ಆಸುಪಾಸಿನಲ್ಲಿ, ಮೇರು ಗಗನದಲ್ಲಿ ಮೈದಳೆವ ಅತ್ಯದ್ಭುತ ಬಣ್ಣ-ಬೆಡಗಿನ ವಿದ್ಯಮಾನ `ಧ್ರುವಪ್ರಭೆ~ಯ ಒಂದು ಸುಂದರ ದೃಶ್ಯ ಚಿತ್ರ-1ರಲ್ಲಿದೆ. ಭೂ ವಾತಾವರಣದ ಯಾವ ಪದರದಲ್ಲಿ ಧ್ರುವಪ್ರಭೆಗಳು ಒಡಮೂಡುತ್ತವೆ?ಅ. ಹವಾಗೋಳ   ಬ. ಅಯಾನುಗೋಳ

ಕ. ಮಧ್ಯಗೋಳ   ಡ. ಸ್ತರಗೋಳ

2. ಇದೊಂದು ಲೋಹ (ಚಿತ್ರ-2). ಇದರದು ಬೆಳ್ಳಿಯ ಬಣ್ಣ, ಬಂಗಾರಕ್ಕಿಂತ ಅಧಿಕ ಬೆಲೆ, ಆಭರಣ ಯೋಗ್ಯ ಗುಣ. ಯಾವುದು ಈ ಲೋಹ?ಅ. ಟಂಗ್‌ಸ್ಟನ್  ಬ. ಮಾಲಿಬ್ಡಿನಂ

ಕ. ಇರಿಡಿಯಂ  ಡ. ಪ್ಲಾಟಿನಂ

3. ಕಲ್ಲಿದ್ದಿಲು ಉರಿಸಿ ವಿದ್ಯುತ್ ಉತ್ಪಾದಿಸುವ `ಶಾಖ ವಿದ್ಯುತ್ ಸ್ಥಾವರ~ ಚಿತ್ರ-3ರಲ್ಲಿದೆ. ಉರಿವ ಕಲ್ಲಿದ್ದಿಲಿನಿಂದ ಹೊರಬೀಳುವ ಅಪಾಯಕಾರಿ ಅಂಶಗಳು ಮತ್ತವುಗಳ ಕೆಟ್ಟ ಪರಿಣಾಮಗಳ ಪಟ್ಟಿ ಮಾಡಿದೆ. ಸರಿಹೊಂದಿಸಬಲ್ಲಿರಾ?1. ಗಂಧಕದ ಡೈ ಆಕ್ಸೈಡ್  ಅ. ಘೋರ ಕಾಯಿಲೆಗಳು

2. ಇಂಗಾಲದ ಡೈ ಆಕ್ಸೈಡ್     ಬ. ಆಮ್ಲ ಮಳೆ

3. ಹಾರು ಬೂದಿ         ಕ. ಕೃಷಿ ಭೂಮಿ ನಾಶ

4. ಭಾರ ಲೋಹಗಳು    ಡ. ಭೂ ತಾಪ  ಏರಿಕೆ

4. ಅದ್ಭುತ ಹಾರಾಟ ಸಾಮರ್ಥ್ಯ ಪ್ರದರ್ಶಿಸುತ್ತಿರುವ ಹಕ್ಕಿ ಜೋಡಿಯೊಂದು ಚಿತ್ರ-4 ರಲ್ಲಿದೆ. ಈ ಕೆಳಗಿನ ಅಂಶಗಳಲ್ಲಿ ವಿಶ್ವದಾಖಲೆಗಳ ಸ್ಥಾಪಿಸಿರುವ ಹಕ್ಕಿಗಳನ್ನು ಹೆಸರಿಸಬಲ್ಲಿರಾ?ಅ. ಸದ್ಯದ ಅತಿ ಬೃಹತ್ ಗಾತ್ರ

ಬ. ಅತ್ಯಧಿಕ ರೆಕ್ಕೆ ವಿಸ್ತಾರ

ಕ. ಅತಿ ದೂರದ ವಲಸೆ ಪಯಣ

ಡ. ಅತ್ಯಧಿಕ ವೇಗದ ಹಾರಾಟ

5. ನೈಸರ್ಗಿಕವಾದ `ಕುದಿಜಲದ ಚಿಲುಮೆ~ಯೊಂದರ ದೃಶ್ಯ ಇಲ್ಲಿದೆ (ಚಿತ್ರ-5). ಕುದಿನೀರಿನ ಚಿಲುಮೆಗಳು ಅತ್ಯಧಿಕ ಸಂಖ್ಯೆಯಲ್ಲಿರುವ ದೇಶ ಇವುಗಳಲ್ಲಿ ಯಾವುದು?

ಅ. ಯುಎಸ್‌ಎ  ಬ.ಐಸ್‌ಲೆಂಡ್

ಕ. ನ್ಯೂಜಿಲೆಂಡ್  ಡ. ಜಪಾನ್6. ಇದೊಂದು `ಚಂದ್ರ~. ಇದರಲ್ಲಿ ಇರುವಷ್ಟು ಜೀವಂತ ಜ್ವಾಲಾಮುಖಿ ಇಡೀ ನಮ್ಮ ಸೌರವ್ಯೆಹದ ಬೇರೆ ಯಾವ ಕಾಯದಲ್ಲೂ ಇಲ್ಲ (ಚಿತ್ರ-7).

ಅ. ಈ ಚಂದ್ರ (ಉಪಗ್ರಹ) ಯಾವುದು?

ಬ. ಇದು ಯಾವ ಗ್ರಹವ ಸುತ್ತುತ್ತಿದೆ?

7. ಚಾರ್ಲ್ಸ್ ಡಾರ್ವಿನ್‌ನ ಜೀವಿ ವಿಕಾಸ ಸಿದ್ಧಾಂತಕ್ಕೆ ಪ್ರೇರಣೆ ನೀಡಿದ `ಫಿಂಚ್~ ಹಕ್ಕಿಗಳು ಚಿತ್ರ-6 ರಲ್ಲಿವೆ. ಈ ಹಕ್ಕಿಗಳ ನೈಸರ್ಗಿಕ ನೆಲೆ ಯಾವುದು?ಅ. ಅಂಡಮಾನ್  ಬ. ಹವಾಯ್

ಕ. ಗ್ಯಾಲಪಗಾಸ್  ಡ. ಮಡಗಾಸ್ಕರ್

8. `ಸಿಂಹ~ ಚಿತ್ರ-8 ರಲ್ಲಿದೆ. ಈ ಕೆಳಗೆ ಹೆಸರಿಸಿರುವ ಪ್ರಾಣಿಗಳಲ್ಲಿ ಯಾವುದು ಸಿಂಹದ ಅತಿ ಹತ್ತಿರದ ಸಂಬಂಧಿ?ಅ. ತೋಳ  ಬ. ಬೆಕ್ಕು

ಕ. ಕಿರುಬ ಡ. ಕರಡಿ

ಇ. ಜಿಂಕೆ

9. ಬಲಿಷ್ಠ ಸ್ಫೋಟಕ ವಸ್ತುವೊಂದನ್ನು ಬಳಸಿ ಶಿಥಿಲ ಕಟ್ಟಡವ ಕೆಡವುತ್ತಿರುವ ದೃಶ್ಯ ಚಿತ್ರ-9ರಲ್ಲಿದೆ. ಕೆಳಗಿನವುಗಳಲ್ಲಿ ಯಾವುದು ಸ್ಫೋಟಕ ವಸ್ತು ಅಲ್ಲ?ಅ. ಬ್ಲಾಕ್ ಪೌಡರ್  ಬ. ಡೈನಾಮೈಟ್

ಕ. ಯುರೇನಿಯಂ  ಡ. ಆರ್‌ಡಿಎಕ್ಸ್

ಇ. ಟಿ.ಎನ್.ಟಿ.

10. ಇಡೀ ಮತ್ಸ್ಯಲೋಕದ `ಅತ್ಯಂತ ಬೃಹದ್ಗಾತ್ರದ ಮೀನು~ ಚಿತ್ರ-10 ರಲ್ಲಿದೆ. ಇದರ ಹೆಸರು ಏನು?ಅ. ನೀಲಿ ತಿಮಿಂಗಿಲ   ಬ. ವ್ಹೇಲ್ ಶಾರ್ಕ್

ಕ. ಟೈಗರ್ ಶಾರ್ಕ್ ಡ. ಸಾಲ್ಮನ್

ಇ. ಬ್ಲೂ ಫಿನ್ ಟ್ಯೂನಾ

11. ನೆಲವನ್ನು ಬಗೆದು, ಕತ್ತರಿಸಿ ವಿಶಿಷ್ಟ ಭೂ ನಿಕ್ಷೇಪ ಹೊರತೆಗೆವ ಭಾರೀ ಗಾತ್ರದ ಅಗಾಧ ಬಲದ ವಿಶೇಷ ಯಂತ್ರಸಾಧನ ಚಿತ್ರ-11 ರಲ್ಲಿದೆ. ಯಾವ ನಿಕ್ಷೇಪ ತೆಗೆಯಲು ಈ ಯಂತ್ರ?ಅ. ಕಲ್ಲಿದ್ದಿಲು ಬ. ಅಮೃತಶಿಲೆ

ಕ. ಗ್ರಾನೈಟ್ ಶಿಲೆ  ಡ. ಅದಿರುಗಳು

12. ಚಿತ್ರ-12 ರಲ್ಲಿರುವ ಸಾಗರ ಜೀವಿಯನ್ನು ಗಮನಿಸಿದಿರಾ? ವಿಚಿತ್ರ ರೂಪದ, ಪಾರದರ್ಶಕ ಶರೀರದ ಈ ಜೀವಿಗಳನ್ನು ಗುರುತಿಸಬಲ್ಲಿರಾ?ಅ. ಅಕ್ಟೋಪಸ್       ಬ. ಸ್ಕಿಡ್

ಕ. ಜೆಲ್ಲಿ ಮೀನು        ಡ. ಐಸ್ ಫಿಶ್ಉತ್ತರಗಳು

1. ಬ-ಅಯಾನುಗೋಳ

2. ಡ-ಪ್ಲಾಟಿನಂ

3. 1-ಬ; 2-ಡ; 3-ಕ; 4-ಅ.

4. ಅ-ಆಸ್ಟ್ರಿಚ್; ಬ-ಆಲ್‌ಬಟ್ರಾಸ್; ಕ-ಆರ್ಕ್‌ಟಿಕ್ ಟರ್ನ್; ಡ-ಸ್ವಿಫ್ಟ್.

5. ಬ-ಐಸ್‌ಲೆಂಡ್

6. ಅ-`ಅಯೋ~; ಬ-ಗುರುಗ್ರಹ

7. ಕ-ಗ್ಯಾಲಪಗ್ಯಾಸ್

8. ಬ-ಬೆಕ್ಕು

9. ಕ-ಯುರೇನಿಯಂ

10. ಬ-ವ್ಹೇಲ್ ಶಾರ್ಕ್

11. ಅ-ಕಲ್ಲಿದ್ದಿಲು

12. ಕ-ಜೆಲ್ಲಿ ಮೀನು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry