ವಿಟ್ನಿ ಸಾವು: ವಿಷವಿಜ್ಞಾನ ವರದಿ ನಿರೀಕ್ಷೆ

7

ವಿಟ್ನಿ ಸಾವು: ವಿಷವಿಜ್ಞಾನ ವರದಿ ನಿರೀಕ್ಷೆ

Published:
Updated:

ಲಾಸ್ ಏಂಜಲೀಸ್ (ಪಿಟಿಐ): ನಿಗೂಢವಾಗಿ ನಿಧನ ಹೊಂದಿದ ಖ್ಯಾತ ಗಾಯಕಿ ವಿಟ್ನಿ ಹ್ಯೂಸ್ಟನ್ ಅವರ ದೇಹದ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಮರಣದ ಕಾರಣ ಪತ್ತೆಗೆ ಪೊಲೀಸರು ವಿಷವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದಾರೆ.ವಿಷವಿಜ್ಞಾನ ವರದಿ ಬರಲು ಕನಿಷ್ಠ ಆರರಿಂದ ಎಂಟು ವಾರಗಳು ಅಗತ್ಯವಿದ್ದು, ಅಲ್ಲಿಯವರೆಗೆ ಪೊಲೀಸರು ಸಾವಿನ ಕಾರಣವನ್ನು ಹೇಳಲು ಸಾಧ್ಯವಿಲ್ಲ.ಸಂಗೀತ ತಂಡದ ಸದಸ್ಯರೊಬ್ಬರು ವಿಟ್ನಿ ಹ್ಯೂಸ್ಟನ್ ಅವರ ದೇಹವನ್ನು ಶುಕ್ರವಾರ ಹೋಟೆಲ್‌ನ ಸ್ನಾನ ಗೃಹದಲ್ಲಿ  ನೋಡಿದ ನಂತರವಷ್ಟೇ ಅವರು ಸತ್ತಿರುವುದು ಪತ್ತೆಯಾಗಿದೆ. ಅವರ ಸಾವಿನ ಹಿಂದೆ ಯಾವುದೇ ನಿಗೂಢ ಕಾರಣಗಳು ಇರುವ ಬಗ್ಗೆ ಖಚಿತ ಮಾಹಿತಿ ದೊರಕಿಲ್ಲ.ಗಾಯಕಿ ವಿಟ್ನಿ ಹ್ಯೂಸ್ಟನ್ ಮಗಳು ಬಾಬಿ ಕ್ರಿಸ್ಟಿನಾ ಬ್ರೌನ್ (18) ತಾಯಿ ಹಠಾತ್ ನಿಧನದಿಂದ ಆಘಾತಗೊಂಡು ಆಸ್ಪತ್ರೆ ಸೇರಿದ್ದಾಳೆ ಎಂದು ಮೂಲಗಳು ತಿಳಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry