ಸೋಮವಾರ, ಏಪ್ರಿಲ್ 19, 2021
31 °C

ವಿಟ್ಲ: ಪೊಲೀಸ್ ವಸತಿಗೃಹದ ನೀರು ಬಿಲ್ಲವ ನಿವೇಶನಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಟ್ಲ: ಇಲ್ಲಿಗೆ ಸಮೀಪದ ಸಂತೆ ಮಾರುಕಟ್ಟೆ ಪುರಭವನ ಬಳಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಆರು ತಿಂಗಳ ಹಿಂದೆ ಪೊಲೀಸ್ ವಸತಿಗೃಹ ನಿರ್ಮಾಣವಾಗಿ ಉದ್ಘಾಟನೆ ನಡೆದಿತ್ತು. ಪಕ್ಕದಲೇ ಯೂತ್ ಬಿಲ್ಲವ ಸಂಘದ ನಿವೇಶನವಿದ್ದು, ವಸತಿಗೃಹದಿಂದ ಬರುವ ಕೊಳಚೆ ನೀರು ಪರಿಸರದಲ್ಲಿ ದುರ್ನಾತ ಬೀರುತ್ತಿದೆ ಎಂದು ಸಂಘ ಆರೋಪಿಸಿದೆ.ಪೊಲೀಸ್ ವಸತಿಗೃಹದಿಂದ ತ್ಯಾಜ್ಯ ಮಿಶ್ರಿತ  ಕೊಳಚೆ ನೀರು ಈ ಪ್ರದೇಶಕ್ಕೆ ನಿರಂತರವಾಗಿ ಹರಿಯುತ್ತಿದೆ. ಬಿಲ್ಲವ ಸಂಘದ ನಿವೇಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದ ಸಂದರ್ಭ ಈ ಕೊಳಚೆ ನೀರಿನಿಂದ ತೊಂದರೆಯಾಗಿದೆ ಎಂದು ಅವರು ದೂರಿದ್ದಾರೆ. ಪೊಲೀಸ್ ವಸತಿ ಗೃಹದಿಂದ ಕೊಳಚೆ ನೀರು ಹರಿಯಲು ಸಮರ್ಪಕವಾದ ಜಾಗವಿಲ್ಲದ ಪರಿಣಾಮ ನೀರೆಲ್ಲ ನಿವೇಶನಕ್ಕೆ ಹರಿದು ಅಲ್ಲಿ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಲ್ಲವ ಸಂಘದ ಸದಸ್ಯರು ದೂರಿದ್ದಾರೆ.ಈ ನಿವೇಶನದ ಸಮೀಪದಲ್ಲೇ ಕುಡಿಯುವ ನೀರಿನ ಸಾರ್ವಜನಿಕ ಬಾವಿಯಿದ್ದು, ಕೊಳಚೆ ನೀರು ಅದನ್ನು ಸೇರುತ್ತಿದೆ ಎಂದು ದೂರಲಾಗಿದೆ. ಈ ಬಗ್ಗೆ ಸಂಘದ ಸದಸ್ಯರು ವಿವಿಧ ಇಲಾಖೆಗಳಿಗೆ ದೂರು ನೀಡ್ದ್ದಿದಾರೆ.  ಸಂಬಂಧಪಟ್ಟವರು ಇದಕ್ಕೆ ಪರಿಹಾರ ಕಂಡುಕೊಂಡು ಬಿಲ್ಲವ ನಿವೇಶನದಲ್ಲಿ ದುರ್ನಾತ ಬೀರುವುದನ್ನು ತಪ್ಪಿಸಬೇಕು ಎಂದು ಸಂಘದ ಸದಸ್ಯರು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.