ವಿಠಲ್ ಮಾಸ್ಟರ್‌ಗೆ ಸಂದೇಶ ಪ್ರಶಸ್ತಿ

7

ವಿಠಲ್ ಮಾಸ್ಟರ್‌ಗೆ ಸಂದೇಶ ಪ್ರಶಸ್ತಿ

Published:
Updated:

ಮಂಗಳೂರು: ನಗರದ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ಈ ಸಾಲಿನ 10 ಪ್ರಶಸ್ತಿಗಳ ಪಟ್ಟಿ ಪ್ರಕಟಿಸಿದ್ದು, ನಗರದ ಮಾಸ್ಟರ್ ವಿಠಲ್ ಶೆಟ್ಟಿ(ಕಲಾ ವಿಭಾಗ) ಹಾಗೂ ಪತ್ರಕರ್ತೆ ಗೌರಿ ಲಂಕೇಶ್(ಪತ್ರಿಕೋದ್ಯಮ) ಅವರಿಗೂ ‘ಸಂದೇಶ ಪ್ರಶಸ್ತಿ’ ಸಂದಿದೆ. ನಗರದ ಬಜ್ಜೋಡಿಯಲ್ಲಿನ ಸಂದೇಶ ಸಂಸ್ಥೆಯಲ್ಲಿ ಇದೇ 13ರ ಸಂಜೆ 5.30ಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಮಂಡಳಿ ಅಧ್ಯಕ್ಷ ನಾ.ಡಿಸೋಜ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.71 ವರ್ಷಗಳಿಂದ ಭರತನಾಟ್ಯ ಕ್ಷೇತ್ರದಲ್ಲಿ ನಾಟ್ಯ ಗುರುವಾಗಿ ಸೇವೆ ಸಲ್ಲಿಸುತ್ತಾ ನೂರಾರು ಶಿಷ್ಯರನ್ನು ರೂಪಿಸಿರುವ ಮಾಸ್ಟರ್ ವಿಠಲ್ ಶೆಟ್ಟಿ, ಮಹಾಭಾರತ, ರಾಮಾಯಣ ಮತ್ತು ಬೈಬಲ್ ಆಧಾರಿತ ನೃತ್ಯರೂಪಕಗಳನ್ನೂ ಪ್ರಸ್ತುತಪಡಿಸಿ ಕಲಾಸ್ತಕರ ಮೆಚ್ಚುಗೆ ಪಡೆದಿದ್ದಾರೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry