ಗುರುವಾರ , ಆಗಸ್ಟ್ 22, 2019
27 °C

ವಿದರ್ಭ: ನಾಳೆ ಜಂತರ್ ಮಂತರ್‌ನಲ್ಲಿ ಧರಣಿ

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್): ಪ್ರತ್ಯೇಕ ವಿದರ್ಭ ರಾಜ್ಯ ರಚನೆಗೆ ಒತ್ತಾಯಿಸುತ್ತಿರುವ ವಿದರ್ಭ ಜಂಟಿ ಕ್ರಿಯಾ ಸಮಿತಿ, ಹೊಸ ರಾಜ್ಯ ಬೇಡಿಕೆ ಒಕ್ಕೂಟ ಇಲ್ಲಿನ ಸಂಸತ್ ಭವನ ಬಳಿಯ ಜಂತರ್ ಮಂತರ್ ಮುಂದೆ ಆ. 5ರಂದು ಧರಣಿ ನಡೆಸಲು ನಿರ್ಧರಿಸಿವೆ.`ಹೊಸ ರಾಜ್ಯ ರಚನೆ ನಿರ್ಧಾರ ಕೈಗೊಂಡಾಗ ವಿದರ್ಭ ಬಗ್ಗೆ ಕೂಡ ಪರಿಶೀಲಿಸಲಾಗುವುದು ಎಂದು ಕೇಂದ್ರ ಈ ಹಿಂದೆ ಭರವಸೆ ನೀಡಿತ್ತು. ಈ ಹಿಂದುಳಿದ ಭಾಗಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಮಾಜಿ ಶಾಸಕ ವಾಮನರಾವ್ ಚಟಪ್ ಹೇಳಿದ್ದಾರೆ.ವಿರೋಧವಿಲ್ಲ: `ಅಂಖಡ ಮಹಾರಾಷ್ಟ್ರವೇ ಇರಲಿ ಎಂಬುದು ನನ್ನ ಬಯಕೆ. ಆದರೆ, ವಿದರ್ಭ ಬೇಡಿಕೆಯನ್ನು ನಾನು ವಿರೋಧಿಸುವುದಿಲ್ಲ' ಎಂದು ಕೃಷಿ ಸಚಿವ ಶರದ್ ಪವಾರ್ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

Post Comments (+)