ವಿದಾಯ ಹೇಳಲಿರುವ ಮೈಕಲ್ ಶುಮೇಕರ್

7

ವಿದಾಯ ಹೇಳಲಿರುವ ಮೈಕಲ್ ಶುಮೇಕರ್

Published:
Updated:

ಸುಜುಕಾ (ಪಿಟಿಐ/ಐಎಎನ್‌ಎಸ್): ಏಳು ಬಾರಿಯ ವಿಶ್ವ ಚಾಂಪಿಯನ್ ಮೈಕಲ್ ಶುಮೇಕರ್ ಈ ಬಾರಿಯ ಫಾರ್ಮುಲಾ ಒನ್ ರೇಸ್ ಋತುವಿನ ಅಂತ್ಯಕ್ಕೆ ಮತ್ತೆ ವಿದಾಯ ಹೇಳಲಿದ್ದಾರೆ.ಈ ವಿಷಯವನ್ನು ಜರ್ಮನಿಯ ಶುಮೇಕರ್ ಗುರುವಾರ ತಿಳಿಸಿದ್ದಾರೆ. ಈ ಹಿಂದೆ ಒಮ್ಮೆ ಅವರು ವಿದಾಯ ಹೇಳಿದ್ದರು. ಆದರೆ ಕೆಲದಿನಗಳಲ್ಲಿ ವಿದಾಯದಿಂದ ಹೊರಬಂದು ಎಫ್-1 ರೇಸ್‌ನಲ್ಲಿ ಪಾಲ್ಗೊಂಡಿದ್ದರು.

ಶುಮೇಕರ್ ಮರ್ಸಿಡೀಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ 2013ರ ಋತುವಿನಿಂದ ಬ್ರಿಟನ್‌ನ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಜೊತೆ ಮರ್ಸಿಡೀಸ್ ಒಪ್ಪಂದ ಮಾಡಿಕೊಂಡಿದೆ.ಕೆಲ ದಿನಗಳ ಹಿಂದೆ ನಡೆದ ಈ ಘಟನೆ ಶುಮೇಕರ್ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿರಬಹುದು ಎನ್ನಲಾಗಿದೆ.2012ರ ಋತುವಿನ ಅಂತ್ಯಕ್ಕೆ ವಿದಾಯ ಹೇಳಲು ನಾನು ತೀರ್ಮಾನ ತೆಗೆದುಕೊಂಡಿದ್ದೇನೆ. ಒಂದಲ್ಲ ಒಂದು ದಿನ ವಿದಾಯ ಹೇಳಲೇಬೇಕು. ಅದಕ್ಕೆ ಈಗ ಸೂಕ್ತ ಸಮಯ. ಉತ್ತಮ ಚಾಲಕರೊಂದಿಗೆ ಸ್ಪರ್ಧಿಸುವ ತಾಕತ್ತು ನನ್ನ ಬಳಿ ಇನ್ನೂ ಇದೆ. ಆದರೆ ವಿದಾಯ ಹೇಳಬೇಕು ಅನಿಸಿತು.ಅದಕ್ಕೆ ಈ ನಿರ್ಧಾರ ಕೈಗೊಂಡಿದ್ದೇನೆ. ಮುಂದೆ ಮತ್ತೆ ಕಣಕ್ಕಿಳಿಯುವುದಿಲ್ಲ~ ಎಂದು ಶುಮೇಕರ್ ನುಡಿದಿದ್ದಾರೆ.ಶುಮೇಕರ್ 1991ರಲ್ಲಿಯೇ ಬೆಲ್ಜಿಯಂ ಗ್ರ್ಯಾನ್ ಪ್ರಿ ಮೂಲಕ ಫಾರ್ಮುಲಾ ಒನ್ ರೇಸ್‌ಗೆ ಪದಾರ್ಪಣೆ ಮಾಡಿದ್ದರು. 2006ರವರೆಗೆ ಹಲವು ದಾಖಲೆ ಬರೆಯುತ್ತಾ ರೇಸ್‌ನಲ್ಲಿ ಪಾರಮ್ಯ ಸಾಧಿಸಿದ್ದರು. ಅದರಲ್ಲಿ ಏಳು ಬಾರಿಯ ಚಾಂಪಿಯನ್ ಆದರು.91 ರೇಸ್‌ಗಳನ್ನು ಜಯಿಸಿದರು. 2000-2004ರ ಅವಧಿಯಲ್ಲಿ ಸತತ ಐದು ಬಾರಿ ಪ್ರಶಸ್ತಿ ಗೆದ್ದಿದ್ದರು. ಆಗ ಅವರು ಫೆರಾರಿ ತಂಡ ಪ್ರತಿನಿಧಿಸುತ್ತಿದ್ದರು. `ಸರ್ವಶ್ರೇಷ್ಠ ರೇಸರ್~ ಎಂಬ ಪಟ್ಟವೂ ಅವರಿಗೆ ಲಭಿಸಿದೆ.43 ವಯಸ್ಸಿನ ಶುಮೇಕರ್ 2006ರಲ್ಲಿ ವಿದಾಯ ಹೇಳಿದ್ದರು. ಆದರೆ ಮತ್ತೆ 2010ರಲ್ಲಿ ರೇಸ್ ಅಂಗಳಕ್ಕಿಳಿದರು. ಈ ಬಾರಿ ಮರ್ಸಿಡೀಸ್ ತಂಡವನ್ನು ಪ್ರತಿನಿಧಿಸಿದರು. ಆದರೆ ಮತ್ತೆ ಚಾಂಪಿಯನ್ ಆಗಲು ಸಾಧ್ಯವಾಗಲಿಲ್ಲ. ಈ ಬಾರಿಯ ಫಾರ್ಮುಲಾ ಒನ್ ರೇಸ್ ಋತು ನವೆಂಬರ್ 25ಕ್ಕೆ (ಬ್ರೆಜಿಲ್ ಗ್ರ್ಯಾನ್ ಪ್ರಿ) ಕೊನೆಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry