ಮಂಗಳವಾರ, ಮೇ 11, 2021
20 °C

ವಿದೇಶಕ್ಕೆ ತೆರಳಿದ್ದ ಸಚಿವರಿಗೆ ಬುಲಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾಸಗಿ ಭೇಟಿ ಸಲುವಾಗಿ ವಿದೇಶಕ್ಕೆ ತೆರಳಿರುವ ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಸ್ವದೇಶಕ್ಕೆ ವಾಪಸಾಗುವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೂಚನೆ ನೀಡಿದ್ದಾರೆ.

`ರಾಜ್ಯದಲ್ಲಿ ಬರ ಇರುವ ಕಾರಣದಿಂದ ಸಚಿವರಿಗೆ ವಾಪಸ್ ಬರಲು ಸೂಚನೆ ನೀಡಿದ್ದೇನೆ~ ಎಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.ನಾಲ್ಕು ದಿನಗಳ ಹಿಂದೆಯೇ ಸಚಿವರು ಕುಟುಂಬ ಸಮೇತ ಇಟಲಿ, ಫ್ರಾನ್ಸ್ ಮತ್ತು ಸ್ಪೇನ್ ದೇಶಗಳಿಗೆ ಪ್ರವಾಸ ತೆರಳಿದ್ದಾರೆ. ಇನ್ನು ಮೂರು ದಿನಗಳಲ್ಲಿ ಅವರ ಪ್ರವಾಸವೇ ಪೂರ್ಣವಾಗಲಿದ್ದು, ವಿಮಾನ ಟಿಕೆಟ್ ಲಭ್ಯತೆ ಆಧಾರದ ಮೇಲೆ ಅವರು ಪ್ರವಾಸವನ್ನು ಮೊಟಕುಗೊಳಿಸಿ ನಗರಕ್ಕೆ ವಾಪಸಾಗಲಿದ್ದಾರೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.