ವಿದೇಶಕ್ಕೆ ಪ್ರತಿಭಾ ಪಲಾಯನ: ಭಟ್ಟ ವಿಷಾದ

7

ವಿದೇಶಕ್ಕೆ ಪ್ರತಿಭಾ ಪಲಾಯನ: ಭಟ್ಟ ವಿಷಾದ

Published:
Updated:

ಬೆಳಗಾವಿ: “ನಮ್ಮ ದೇಶದ ಎಂಜಿನಿ ಯರಿಂಗ್ ವಿದ್ಯಾರ್ಥಿಗಳು ತಮ್ಮ ಪದವಿ ಪೂರ್ಣಗೊಳಿಸಿದ ಬಳಿಕ ಪಾಶ್ಚಾತ್ಯ ಸಂಸ್ಕೃತಿ ಹಾಗೂ ಉದ್ಯೋಗಗಳಿಗೆ ಮಾರುಹೋಗಿ ವಿದೇಶಗಳತ್ತ ಪಲಾಯನ ಬೆಳೆಸುತ್ತಿದ್ದಾರೆ” ಎಂದು  ಬೆಂಗಳೂರಿನ ಸಾಹಿತಿ ಪ್ರೊ.ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ವಿಷಾದಿಸಿದರು.ನಗರದ ಕೆಎಲ್‌ಇ ಸಂಸ್ಥೆಯ ಡಾ.ಎಂ.ಎಸ್. ಶೇಷಗಿರಿ ಎಂಜಿನಿ ಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ಬಳಗ 2011-12ನೇ ಸಾಲಿನ ಕಾರ್ಯಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿ ಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.“ನಮ್ಮ ರಾಜ್ಯ ಹಾಗೂ ದೇಶದಲ್ಲಿರುವ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಂಪೆನಿಗಳ ಸೌಲಭ್ಯಗಳನ್ನು ಬಳಕೆ ಮಾಡಿ ಕೊಳ್ಳಬೇಕು. ತಂದೆ- ತಾಯಿ ಗಳೊಂದಿಗೆ ಇಲ್ಲೇ ನೆಲೆಸುವ ಜೊತೆಗೆ ಸಾಮಾಜಿಕ ಹಾಗೂ ಕೌಟುಂಬಿಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು” ಎಂದು ಸಲಹೆ ನೀಡಿದರು.“ಕಾಲೇಜಿನಲ್ಲಿರುವ ಅನ್ಯ ರಾಜ್ಯಗಳ ಕನ್ನಡೇತರ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆಯ ಕಾರ್ಯಕ್ರಮ ಹಮ್ಮಿ ಕೊಳ್ಳುತ್ತಿರುವುದು ಮೆಚ್ಚುಗೆಯ ವಿಷಯವಾಗಿದೆ.  ಶ್ರೇಷ್ಠ ಕವಿಗಳು ಹಾಗೂ ಸಾಹಿತಿಗಳ ಬದುಕು ಬರಹಗಳ ಬಗ್ಗೆ ಕಾರ್ಯಕ್ರಮ ನಡೆಯು ವಂತಾಗಬೇಕು ಎಂದು ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಮುಖ್ಯಸ್ಥ ಎಸ್.ಸಿ. ಮೆಟ್‌ಗುಡ್ಡ,  “ಕಳೆದ 25 ವರ್ಷಗಳಿಂದ ಕನ್ನಡ ಬಳಗ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿರುವುದು ಶ್ಲಾಘನೀಯ ಕೆಲಸ” ಎಂದರು.ಪ್ರಾಚಾರ್ಯ ಡಾ. ಶರಣ ಬಸವ ಪಿಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಪೂರ್ವಿ ಪಾಗದ ಪ್ರಾರ್ಥಿಸಿದರು. ಪ್ರೊ. ಶ್ರೀದೇವಿ ನಾಗರ ಮುನವಳ್ಳಿ ಸ್ವಾಗತಿಸಿದರು. ಪ್ರೊ. ಶಂಕರ ಪಡೆಣ್ಣವರ ಪರಿಚಯಿಸಿದರು. ಲಿಂಗರಾಜ ಹಳ್ಳಿ ಕನ್ನಡ ಬಳಗದ ವರದಿ ವಾಚಿಸಿದರು. ವಿಜಯ್ ಧೂಳಾಯಿ ವಂದಿಸಿದರು. ಶ್ರುತಿ ಕರಿಕಟ್ಟಿ ಹಾಗೂ ರಾಜು ಪಾಟೀಲ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry