ವಿದೇಶದಲ್ಲಿ ಬೆಂಕಿ ಬಿರುಗಾಳಿ

7

ವಿದೇಶದಲ್ಲಿ ಬೆಂಕಿ ಬಿರುಗಾಳಿ

Published:
Updated:

ಎಸ್.ಬಿ.ಕೆ.ಫಿಲ್ಮ್ ಕಾರ್ಪೋರೇಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಬೆಂಕಿ ಬಿರುಗಾಳಿ’ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಎರಡು ಹಾಡುಗಳು ಸೇರಿದಂತೆ ಹಲವು ಸನ್ನಿವೇಶಗಳ ಚಿತ್ರೀಕರಣ ಈ ಹಂತದಲ್ಲಿ ನಡೆದಿದೆ. ಒಟ್ಟು ಇಪ್ಪತ್ತು ದಿನಗಳ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿರುವ ಚಿತ್ರತಂಡ ಈಗ ವಿದೇಶಕ್ಕೆ ಪ್ರಯಾಣ ಬೆಳೆಸಿದೆ.ಆಸ್ಟ್ರೇಲಿಯಾ, ಹಾಂಕಾಂಗ್ ಮತ್ತು ಸ್ವಿಟ್ಜರ್‌ಲೆಂಡ್‌ನಲ್ಲಿ ಚಿತ್ರಕ್ಕೆ 30 ದಿನಗಳ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರದ ನಿರ್ಮಾಪಕ ಎಸ್.ಕೆ.ಬಷೀದ್ ತಿಳಿಸಿದ್ದಾರೆ.ಬಷೀದ್ ಅವರೇ ‘ಬೆಂಕಿ ಬಿರುಗಾಳಿ’ಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಮಧು ವಿ. ನಾಯ್ಡು ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಎಂ.ಎಂ.ಶ್ರಿಲೇಖಾ ಸಂಗೀತ ನೀಡಿದ್ದಾರೆ. ಅರವಿಂದ್ ಅವರ ಸಂಕಲನವಿರುವ ಚಿತ್ರದ ತಾರಾಬಳಗದಲ್ಲಿ ನಮಿತಾ, ಸಲೋನಿ, ಅರುಣ್‌ಕುಮಾರ್ ಮುಂತಾದವರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry