ಶುಕ್ರವಾರ, ನವೆಂಬರ್ 15, 2019
21 °C

ವಿದೇಶ:ಸಂಕ್ಷಿಪ್ತ ಸುದ್ದಿ

Published:
Updated:

ನೇಪಾಳ ನದಿಗೆ ಬಸ್: 17 ಸಾವು

ಕಠ್ಮಂಡು (ಪಿಟಿಐ): ನೇಪಾಳದಲ್ಲಿ ಸೋಮವಾರ ಸಂಭವಿಸಿದ ಎರಡು ಪ್ರತ್ಯೇಕ ಬಸ್ ಅಪಘಾತಗಳಲ್ಲಿ 20 ಜನ ಮೃತಪಟ್ಟಿದ್ದಾರೆ. ಕೇಂದ್ರ ನೇಪಾಳದ ದಡಿಂಗ್ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿದ್ದ ತ್ರಿಶೂಲಿ ನದಿಗೆ ಬಸ್ ಉರುಳಿದಾಗ 17 ಜನರು ಮೃತಪಟ್ಟರು.ನವಲ್‌ಪರಾಸಿ ಜಿಲ್ಲೆಯ ಸುನ್ವಾಲ್ ಬಳಿ ಸಂಭವಿಸಿದ ಇನ್ನೊಂದು ಬಸ್ ಅಪಘಾತದಲ್ಲಿ ಮೂವರು ಮಂದಿ ಮೃತಪಟ್ಟು ನಲವತ್ತು ಜನ ಗಾಯಗೊಂಡರು.ರಾಯಭಾರಿ ಕಚೇರಿಯಲ್ಲಿ ಬೆಂಕಿ

ಯಾಂಗೂನ್ (ಐಎಎನ್‌ಎಸ್):
ಮ್ಯಾನ್ಮಾರ್‌ನ ಯಾಂಗೂನ್ ನಗರದಲ್ಲಿ ಭಾರತೀಯ ರಾಯಭಾರ ಕಚೇರಿ ಇರುವ ಐದು ಅಂತಸ್ತಿನ ಕಟ್ಟಡಕ್ಕೆ ಭಾನುವಾರ ಸಂಜೆ ಬೆಂಕಿ ತಗುಲಿತ್ತು.ಆದರೆ ತಕ್ಷಣವೇ ಅದನ್ನು ನಂದಿಸಲಾಯಿತು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರತಿಕ್ರಿಯಿಸಿ (+)