ವಿದೇಶಾಂಗ ಕಾರ್ಯದರ್ಶಿ ಹುದ್ದೆ: ಹಿಂದೆ ಸರಿದ ಸೂಸಾನ್ ರೈಸ್

7

ವಿದೇಶಾಂಗ ಕಾರ್ಯದರ್ಶಿ ಹುದ್ದೆ: ಹಿಂದೆ ಸರಿದ ಸೂಸಾನ್ ರೈಸ್

Published:
Updated:

ವಾಷಿಂಗ್ಟನ್ (ಪಿಟಿಐ): ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹುದ್ದೆಗಾಗಿ ತೀವ್ರ ಪೈಪೋಟಿ ನಡೆಸುತ್ತಿರುವ ಅಭ್ಯರ್ಥಿಗಳ ಪೈಕಿ ಅತ್ಯಂತ ಪ್ರಮುಖರಾದ ಸೂಸಾನ್ ರೈಸ್ ಅವರು, ಏಕಾಏಕಿ  ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.ಅಧ್ಯಕ್ಷ ಬರಾಕ್ ಒಬಾಮ ಅವರ ನೆಚ್ಚಿನ ಆಯ್ಕೆಯಾಗಿದ್ದ ಸೂಸಾನ್ ಅವರು, ತಮ್ಮ ನಾಮಪತ್ರಕ್ಕೆ ರಿಪಬ್ಲಿಕನ್ ಪಕ್ಷದ ಸೆನೆಟ್ ಸದಸ್ಯರಿಂದ ವಿರೋಧ ಎದುರಾಗಲಿರುವ ಕಾರಣದಿಂದ ಈ ನಿರ್ಧಾರಕ್ಕೆ ಬಂದ್ದ್ದಿದು, ಒಬಾಮ ಕೂಡ ಅವರ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.48 ವರ್ಷದ ಸೂಸಾನ್ ರೈಸ್ ಅವರು, ಸದ್ಯ ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಿಲರಿ ಕ್ಲಿಂಟನ್ ಅವರಿಂದ ತೆರವಾಗಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ, ಮೆಸಾಚುಸೆಟ್ಸ್‌ನ ಸೆನೆಟ್ ಸದಸ್ಯ ಜಾನ್ ಕೆರ‌್ರಿ ಅವರು  ಆಯ್ಕೆಯಾಗುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry