ಬುಧವಾರ, ಜನವರಿ 22, 2020
20 °C

ವಿದೇಶಾಂಗ ಸಚಿವ ಕೃಷ್ಣ ಇಸ್ರೇಲ್- ಪ್ಯಾಲಿಸ್ತೈನ್ ಪ್ರವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಅವರು ಭಾನುವಾರದಿಂದ ಮೂರು ದಿನ ಇಸ್ರೇಲ್ ಮತ್ತು ಪ್ಯಾಲಿಸ್ತೈನ್  ಪ್ರವಾಸ ಕೈಗೊಳ್ಳಲಿದ್ದಾರೆ.ಇಸ್ರೇಲ್ ಪ್ರವಾಸದ ಸಮಯದಲ್ಲಿ ಕೃಷ್ಣ ಅವರು ಪ್ರಮುಖವಾಗಿ ~ಶಿಕ್ಷೆಗೆ ಒಳಪಟ್ಟ ವ್ಯಕ್ತಿಗಳ ಹಸ್ತಾಂತರ~ಕ್ಕೆ ಸಂಬಂಧಿಸಿದಂತೆ ಎರಡು ಒಪ್ಪಂದಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.  ಪ್ರಸ್ತುತ ಕೃಷ್ಣ ಅವರ ಇಸ್ತೇಲ್ ಮತ್ತು ಪ್ಯಾಲಿಸ್ತೈನ್ ದೇಶಗಳ ಪ್ರವಾಸವು ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಬಲಗೊಳಿಸುವ ನಿಟ್ಟಿನಲ್ಲಿ ಮಹತ್ವವನ್ನು ಪಡೆದುಕೊಂಡಿದೆ ಎನ್ನಲಾಗಿದೆ.ಪ್ರವಾಸ ಸಮಯದಲ್ಲಿ ಕೃಷ್ಣ ಅವರು ಇಸ್ರೇಲ್ ಅಧ್ಯಕ್ಷ ಸೈಮೆನ್ ಪೇರಸ್ ಮತ್ತು ಪ್ರಧಾನಮಂತ್ರಿ ಬೆಂಜಿಮಿನ್ ನೆಟನ್ಯಾವು   ಹಾಗೂ  ಉಪ ಪ್ರಧಾನಮಂತ್ರಿ ಮತ್ತು ವಿದೇಶಾಂಗ ಸಚಿವರನ್ನು ಭೇಟಿ ಮಾಡಲಿದ್ದಾರೆ. 

 


ಈ ಪ್ರವಾಸದ ಸಂದರ್ಭದಲ್ಲಿ ರಕ್ಷಣೆ, ಭದ್ರತೆ, ಕೃಷಿ ಮತ್ತು ವಿಜ್ಞಾನ- ತಂತ್ರಜ್ಞಾನ ಕ್ಷೇತ್ರಗಳ ಕುರಿತು ಸಹಕಾರ ಮಾತುಕತೆ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೃಷ್ಣ ಅವರು ಜೋರ್ಡಾನ್ ಗೆ ಭೇಟಿ ನೀಡಿ ತನ್ನ ಸಹವರ್ತಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಪ್ರತಿಕ್ರಿಯಿಸಿ (+)