ವಿದೇಶಾಂಗ ಸಮಿತಿಗೆ ಬೆರಾ ನೇಮಕ

7

ವಿದೇಶಾಂಗ ಸಮಿತಿಗೆ ಬೆರಾ ನೇಮಕ

Published:
Updated:
ವಿದೇಶಾಂಗ ಸಮಿತಿಗೆ ಬೆರಾ ನೇಮಕ

ವಾಷಿಂಗ್ಟನ್ (ಐಎಎನ್‌ಎಸ್): ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾದ ಭಾರತೀಯ ಮೂಲದ ಅಮೆರಿಕದ ಪ್ರಜೆ, ಕ್ಯಾಲಿಫೊರ್ನಿಯಾದ ವೈದ್ಯ ಅಮಿ ಬೆರಾ ಅವರನ್ನು ವಿದೇಶಾಂಗ ಸಚಿವಾಲಯದ ಪ್ರತಿಷ್ಠಿತ ವಿಜ್ಞಾನ, ಬಾಹ್ಯಾಕಾಶ ಹಾಗೂ ತಂತ್ರಜ್ಞಾನ ಸಮಿತಿಗಳಿಗೆ ನೇಮಕ ಮಾಡಲಾಗಿದೆ.

ಡೆಮಾಕ್ರಟಿಕ್ ಪಕ್ಷದ 47 ವರ್ಷದ ಬೆರಾ ಕುಟುಂಬದವರು 1950ರಲ್ಲಿ ಅಮೃತಸರದಿಂದ ಅಮೆರಿಕಕ್ಕೆ ವಲಸೆ ಬಂದಿದ್ದಾರೆ. `ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನನ್ನನ್ನು ನೇಮಕ ಮಾಡಲಾಗಿದೆ' ಎಂದು ಬೆರಾ ಅಧಿಕಾರ ಸ್ವೀಕರಿಸಿದ ನಂತರ ಹೇಳಿಕೆ ನೀಡಿದರು.

`ನಮ್ಮ ಉತ್ಪನ್ನ ಹಾಗೂ ಸೇವೆಗಳಿಗೆ ಜಾಗತಿಕವಾಗಿ ಹೊಸದಾಗಿ ಉತ್ತಮ ಮಾರುಕಟ್ಟೆಗಳನ್ನು ಹುಡುಕುವುದರ ಜತೆಯಲ್ಲಿ ಇತರ ದೇಶಗಳ ಜತೆಯಲ್ಲಿ ಸೌಹಾರ್ದ ಸಂಬಂಧಗಳನ್ನು ಬೆಳೆಸಲು

ಶ್ರಮಿಸುವುದಾಗಿ' ಬೆರಾ ಹೇಳಿದರು.

ಭಾರತದ ಸಂಬಂಧಗಳ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, `ಉತ್ತಮ ಜೀವನದ ಕನಸಿನೊಂದಿಗೆ ನನ್ನವರು 1950ರಲ್ಲಿ ಭಾರತದಿಂದ ಅಮೆರಿಕಕ್ಕೆ ವಲಸೆ ಬಂದಿದ್ದು, ಈ ದೇಶ ಅವಕಾಶಗಳ ಭೂಮಿ ಎನಿಸಿದೆ. ಕಳೆದ ಗುರುವಾರ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾದ ನಾನು ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ನನ್ನ ತಂದೆಯೂ ಹಾಜರಿದ್ದರು' ಎಂದರು.

`ಕಷ್ಟಪಟ್ಟರೆ ಎಲ್ಲವನ್ನೂ ಇಲ್ಲಿ ಪಡೆಯಲು ಸಾಧ್ಯ. ಅಮೆರಿಕನ್ನರ ಕನಸಿಗೆ ಹೊರತಾಗಿ ನನ್ನ ಕನಸು ಇಲ್ಲ, ನಾನು ಪ್ರತಿದಿನವೂ ದುಡಿಯುತ್ತೇನೆ. ನನ್ನ ಸಹೊದ್ಯೋಗಿಗಳ ಜತೆ ಸೇರಿಕೊಂಡು ಆರ್ಥಿಕತೆಯನ್ನು ಪುನರ್‌ರಚಿಸಲು ಶ್ರಮವಹಿಸುವೆ' ಎಂದರು. ಮೂರು ಬಾರಿ ರಿಪಬ್ಲಿಕನ್ ಪಕ್ಷದ ಸದಸ್ಯರಾಗಿ ಆಯ್ಕೆಯಾಗಿದ್ದ ಡ್ಯಾನ್ ಲಂಗ್‌ರೆನ್ ಅವರನ್ನು ಅಲ್ಪಮತಗಳ ಅಂತರದಿಂದ ಬೆರಾ ಪರಾಭವಗೊಳಿಸಿಸುವ ಮೂಲಕ ಜನಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry