ಶುಕ್ರವಾರ, ನವೆಂಬರ್ 15, 2019
22 °C
ದಕ್ಷಿಣ ಕೊರಿಯಾ ತೊರೆಯಿರಿ

ವಿದೇಶಿಯರಿಗೆ ಉ. ಕೊರಿಯಾ ಸೂಚನೆ

Published:
Updated:

ಪ್ಯಾಂಗ್‌ಯಾಂಗ್ (ಐಎಎನ್‌ಎಸ್): ದಕ್ಷಿಣ ಕೊರಿಯಾದಲ್ಲಿರುವ ವಿದೇಶಿಯರು ಆ ರಾಷ್ಟ್ರ ತೊರೆಯುವಂತೆ ಉತ್ತರ ಕೊರಿಯಾ ಮಂಗಳವಾರ ಹೇಳಿದೆ ಎಂದು ಕೆಸಿಎನ್‌ಎ ಸುದ್ದಿಸಂಸ್ಥೆ ವರದಿ ಮಾಡಿದೆ.ಏಷ್ಯಾ- ಪೆಸಿಫಿಕ್ ಶಾಂತಿ ಸಮಿತಿ ವಕ್ತಾರರು ವಿದೇಶಿ ಸಂಸ್ಥೆಗಳೊಂದಿಗೆ ಸಭೆ ನಡೆಸಿದ್ದು, ಯುದ್ಧ ಸಂಭವಿಸಿದರೆ ವಿದೇಶಿ ಉದ್ಯೋಗಸ್ಥರು ಮತ್ತು ಪ್ರವಾಸಿಗರು ದಕ್ಷಿಣ ಕೊರಿಯಾದಿಂದ ಹೊರಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದಿದ್ದಾರೆ ಎಂದು `ಕ್ಸಿನ್‌ಹುವಾ' ವರದಿ ಮಾಡಿದೆ.ಅಣ್ವಸ್ತ್ರ ಪರೀಕ್ಷೆ ಬೇಡ:  ಯುದ್ಧೋತ್ಸಾಹದಲ್ಲಿರುವ ಉತ್ತರ ಕೊರಿಯಾ ಮತ್ತೆ ಅಣ್ವಸ್ತ್ರ ಅಥವಾ ಕ್ಷಿಪಣಿ ಪರೀಕ್ಷೆ  ನಡೆಸದಂತೆ ಅಮೆರಿಕ ಎಚ್ಚರಿಕೆ ನೀಡಿದೆ.

ಪ್ರತಿಕ್ರಿಯಿಸಿ (+)