ಮಂಗಳವಾರ, ನವೆಂಬರ್ 19, 2019
28 °C

ವಿದೇಶಿಯರೇ ದಕ್ಷಿಣ ಕೊರಿಯಾ ತೊರೆಯಿರಿ..?

Published:
Updated:

ಯೊಂಗ್ ಯಾಂಗ್ (ಐ ಎ.ಎನ್.ಎಸ್):  ದಕ್ಷಿಣ ಕೊರಿಯಾದಲ್ಲಿ ನೆಲೆಸಿರುವ ವಿದೇಶಿಯರು ದೇಶ ತೊರೆಯುವಂತೆ ಉತ್ತರ ಕೊರಿಯಾ ಎಚ್ಚರಿಕೆ ನೀಡಿದೆ.ದಕ್ಷಿಣ ಕೊರಿಯಾದಲ್ಲಿ ನೆಲೆಸಿರುವ ವಿದೇಶಿಯರು, ಪ್ರವಾಸಿಗರು ಮತ್ತು ವಿವಿಧ ಕಂಪನಿಗಳು ದಕ್ಷಿಣ ಕೊರಿಯಾವನ್ನು ತೊರೆಯುವಂತೆ ಉತ್ತರ ಕೊರಿಯಾದ ಏಷ್ಯಾ ಪೆಸಿಫಿಕ್ ಶಾಂತಿ ಪಾಲನ ಸಮಿತಿಯ ವಕ್ತಾರರು ತಿಳಿಸಿದ್ದಾರೆ.ಯುದ್ಧ ಭೀತಿ ಇರುವುದರಿಂದ ವಿದೇಶಿಯರ ಸುರಕ್ಷತೆಗಾಗಿ ಈ ಎಚ್ಚರಿಕೆ ನೀಡಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)