ಮಂಗಳವಾರ, ಏಪ್ರಿಲ್ 13, 2021
22 °C

ವಿದೇಶಿಯರ ಆಟೊ ರ‌್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದೇಶಿಯರ ಆಟೊ ರ‌್ಯಾಲಿ

ಹೊಸೂರು ರಸ್ತೆಯ ರೂಪೇನ ಅಗ್ರಹಾರದ ರೌಂಡ್ ಟೇಬಲ್ ಶಾಲೆಯ ಆವರಣದಲ್ಲಿ `ಆಟೊರಿಕ್ಷಾ ಚಾಲೆಂಜ್ ಮುಂಬೈ ಎಕ್ಸ್‌ಪ್ರೆಸ್ 2012~ಗೆ ಚಾಲನೆ ನೀಡಲಾಯಿತು.ಆರು ಆಟೊರಿಕ್ಷಾಗಳಲ್ಲಿ 1919 ಕಿ.ಮೀ. ದೂರವನ್ನು 14 ದಿನಗಳಲ್ಲಿ ಕ್ರಮಿಸಲಿರುವ ಈ ಸ್ಪರ್ಧೆಗೆ ಬೆಂಗಳೂರು ಮೆಟ್ರೋಪಾಲಿಟನ್ ರೌಂಡ್ ಟೇಬಲ್ 44ರ ಮುಖ್ಯಸ್ಥ ಬಾಬು ರೆಡ್ಡಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಆರು ದೇಶಗಳ 13 ಮಂದಿ ಟೀಮ್ ಶಾಂತಿ, ಥರ್ಮಾಸ್ ಇಂಡಿಯಾ ಎಕ್ಸ್‌ಪ್ರೆಸ್, ವಲ್ಲೆ ಕುಲ್ಲಾ, ಟೀಂ ಸನ್‌ಶೈನ್ ಹಾಗೂ ಹಿಟ್ ದಿ ರೋಡ್: ಇಂಡಿಯಾ ರೇಸ್, ಈ ತಂಡಗಳು ಸ್ಪರ್ಧೆಯ ಕೊನೆಯ ಸ್ಥಳವಾದ ತಮಿಳುನಾಡಿನ ವೆಲ್ಲೂರನ್ನು ತಲುಪಲಿದ್ದಾರೆ. ಆಸ್ಟ್ರೇಲಿಯಾ, ಡೆನ್ಮಾರ್ಕ್, ಜರ್ಮನಿ, ಅಮೆರಿಕ, ಇಂಗ್ಲೆಂಡ್ ಮುಂತಾದ ದೇಶಗಳ ಸ್ಪರ್ಧಿಗಳು ಇದರಲ್ಲಿದ್ದರೂ ತಾವು ಕ್ರಮಿಸಬೇಕಾದ ಮಾರ್ಗವನ್ನು ತಿಳಿದುಕೊಳ್ಳಲು ಭೂಪಟ ಅಥವಾ ಇನ್ಯಾವುದೇ ಸಾಧನಗಳನ್ನು ಬಳಸುವಂತಿಲ್ಲ. ಬದಲಿಗೆ ಸ್ಥಳೀಯರನ್ನು ವಿಚಾರಿಸಿಕೊಂಡೇ  ಮುಂದುವರಿಯಬೇಕು. ಇದು ಈ ಸ್ಪರ್ಧೆಯ ವೈಶಿಷ್ಟ್ಯ.ಚೆನ್ನೈನ ಸಿಇಎಂಎಸ್ ಸಂಸ್ಥೆಯ ಪಾಲುದಾರಿಕೆಯೊಂದಿಗೆ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರು, ಹಂಗೇರಿಯ ಬುಡಾಪೆಸ್ಟ್‌ನಿಂದ ತಜಕಿಸ್ತಾನದ ದುಷಂಬೆ ಸೆಂಟ್ರಲ್ ಏಷ್ಯನ್ ವ್ಯಾಲಿವರೆಗೆ ನಡೆಯುವ 12,000 ಕಿಮೀ ದೂರದ ರ‌್ಯಾಲಿಯಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆಯುತ್ತಾರೆ.ದುರ್ಬಲ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ರೌಂಡ್ ಟೇಬಲ್ ಇಂಡಿಯಾ ಸಂಘಟನೆಯು ಕಳೆದ ಆರು ವರ್ಷಗಳಿಂದ ಈ ಆಟೊರಿಕ್ಷಾ ರ‌್ಯಾಲಿ ನಡೆಸುತ್ತಿದ್ದು, ಇದರಲ್ಲಿ ಸಂಗ್ರಹವಾಗುವ ಮೊತ್ತವನ್ನು  ತನ್ನ `ಶಿಕ್ಷಣದಿಂದ ಸ್ವಾತಂತ್ರ್ಯ~ `ಶಿಕ್ಷಣದಿಂದ ಸ್ವಾತಂತ್ರ್ಯ~ ಎಂಬ ಯೋಜನೆಗೆ ವಿನಿಯೋಗಿಸಲಾಗುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.