ಶನಿವಾರ, ಜನವರಿ 18, 2020
20 °C

ವಿದೇಶಿ ಚುಟುಕು ಸುದ್ದಿಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ವಿದ್ಯಾರ್ಥಿಗೆ ಪ್ರಶಸ್ತಿ

ಮೆಲ್ಬರ್ನ್ (ಪಿಟಿಐ):
ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡುವುದರಿಂದ ಕನಸುಗಳನ್ನು ನನಸಾಗಿಸಿಕೊಳ್ಳಲು ಸಾಧ್ಯ ಎಂಬುದನ್ನು ಪ್ರಚಾರ ಮಾಡುವ ಉದ್ದೇಶದಿಂದ ಏರ್ಪಡಿಸಲಾಗಿದ್ದ ಜಾಗತಿಕ ಆನ್‌ಲೈನ್‌ ಡಿಜಿಟಲ್‌ ಪೋಸ್ಟ್‌ಕಾರ್ಡ್ ಸ್ಪರ್ಧೆಯಲ್ಲಿ 22ವರ್ಷದ ಭಾರತದ ವಿದ್ಯಾರ್ಥಿ ಉತ್ತಮ ಕುಮಾರ್‌ ವಿಜೇತರಾಗಿದ್ದಾರೆ.ಹರಿಯಾಣದ ಸಣ್ಣ ಹಳ್ಳಿಯವರಾದ ಉತ್ತಮ ಕುಮಾರ್‌ ದೆಹಲಿಯ ಐಐಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಜಾಗತಿಕ ಆನ್‌ಲೈನ್‌ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. 190 ರಾಷ್ಟ್ರಗಳ 37 ಸಾವಿರ ಜನರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಏಳು ವಾರಗಳ ಕಾಲ ಈ ಸ್ಪರ್ಧೆ ನಡೆದಿದೆ.ವೇಗದಲ್ಲಿ ನೀರು ಕುದಿಸುವ ಹೊಸವಿಧಾನ

ಬರ್ಲಿನ್‌ (ಪಿಟಿಐ):
ಭಾರತ ಮೂಲದ ತಜ್ಞರೊಬ್ಬರನ್ನು ಒಳಗೊಂಡ ವಿಜ್ಞಾನಿ­ಗಳ ತಂಡವೊಂದು ಅತಿ ವೇಗವಾಗಿ ಅಂದರೆ ಅರ್ಧ ಪೈಕೊಸೆಕೆಂಡಿನಲ್ಲಿ ನೀರನ್ನು ಕುದಿಸುವ ಹೊಸ ವಿಧಾನವೊಂದನ್ನು ಅಭಿವೃದ್ಧಿ ಪಡಿಸಿದೆ ಎಂದು ಹೇಳಲಾಗಿದೆ.ಈ ಹೊಸ ವಿಧಾನದ ಪಠ್ಯದ ಕಲ್ಪನೆ­ಯನ್ನು ಮಾತ್ರ ಸದ್ಯ ರೂಪಿಸಲಾಗಿದ್ದು, ಪ್ರಾಯೋಗಿಕವಾಗಿ ಇನ್ನಷ್ಟೇ ಪರೀಕ್ಷೆ ನಡೆಸಬೇಕಾಗಿದೆ.

ಹೊಸ ವಿಧಾನದಲ್ಲಿ ಅರ್ಧ ಪೈಕೊಸೆಕೆಂಡ್‌ (ಪೈಕೊಸೆಕೆಂಡ್‌=0.000 000 000 001 ಸೆಕೆಂಡ್‌) ಅವಧಿಯಲ್ಲಿ ಸ್ವಲ್ಪ ಪ್ರಮಾಣದ ನೀರು 600 ಡಿಗ್ರಿ ಸೆಲ್ಸಿಯಸ್‌ ಉಷ್ಣತೆಯಲ್ಲಿ ಕುದಿಯು­ತ್ತದೆ. ಅಂದರೆ ಕಣ್ ರೆಪ್ಪೆ ಮಿಟುಕಿಸುವ ಅವಧಿಗಿಂತಲೂ ಕಡಿಮೆ ಸಮಯದಲ್ಲಿ ನೀರು ಕುದಿಯುತ್ತದೆ.ಡಿ.24: ಮಾತುಕತೆಗೆ ಪಾಕ್‌ ಆಹ್ವಾನ

ಇಸ್ಲಾಮಾಬಾದ್‌(ಪಿಟಿಐ):
ಗಡಿ ನಿಯಂತ್ರಣ ರೇಖೆಯಲ್ಲಿನ ಬಿಕ್ಕಟ್ಟು ಬಗೆಹರಿಸಲು ಹಾಗೂ ಕದನ ವಿರಾಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವ ಕುರಿತು ಈ ತಿಂಗಳ ೨೪ರಂದು ಮಾತುಕತೆ ನಡೆಸಲು ಪಾಕಿಸ್ತಾನದ ಸೇನಾ ಕಾರ್ಯಾಚರಣೆ ಮಹಾ ನಿರ್ದೇಶಕರು ಭಾರತದ ತಮ್ಮ ಸಹವರ್ತಿಗೆ ಆಹ್ವಾನ ನೀಡಿದ್ದಾರೆ.ಮೂರು ತಿಂಗಳ ಹಿಂದೆ ಉಭಯ ದೇಶಗಳ ಪ್ರಧಾನಿಗಳು ನ್ಯೂಯಾರ್ಕ್‌ನಲ್ಲಿ ನಡೆಸಿದ್ದ ಸಭೆಯ ತೀರ್ಮಾನದ ಅನುಸಾರ ಈ ಮಾತುಕತೆಯನ್ನು ಏರ್ಪಡಿಸಲಾಗಿದೆ. ಆದರೆ  ಮಾತುಕತೆ ನಡೆಯುವ ಸ್ಥಳದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ.ಆಸ್ಕರ್‌ಗೆ ‘ಕಾಮಸೂತ್ರ 3ಡಿ’ ಹಾಡುಗಳು

ಲಾಸ್‌ ಏಂಜಲೀಸ್‌ (ಪಿಟಿಐ):
ಕೇರಳ ಮೂಲದ ಚಿತ್ರ ತಯಾರಕ ರೂಪೇಶ್‌ ಪಾಲ್‌ ಅವರ ಬಹು ಭಾಷಾ ಚಿತ್ರ ‘ಕಾಮಸೂತ್ರ 3ಡಿ’ಯ ಐದು ಹಾಡುಗಳು 86ನೇ ವರ್ಷದ ಆಸ್ಕರ್‌ ಪ್ರಶಸ್ತಿಯ ಮೂಲ ಹಾಡುಗಳ ವಿಭಾಗದಲ್ಲಿ ಸ್ಪರ್ಧಿಸಲಿವೆ.  ಈ ವಿಭಾಗದಲ್ಲಿ ಒಟ್ಟು 75 ಹಾಡುಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಪ್ರತಿಕ್ರಿಯಿಸಿ (+)