ಮಂಗಳವಾರ, ಜನವರಿ 28, 2020
24 °C

ವಿದೇಶಿ ನೇರ ಹೂಡಿಕೆ: ಗುರಿ ಸಾಧನೆ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ದೇಶದಲ್ಲಿನ ಉದ್ಯಮ ವಲಯಕ್ಕೆ `ನೇರ ವಿದೇಶಿ ಹೂಡಿಕೆ'(ಎಫ್‌ಡಿಐ) ಆಕರ್ಷಿಸಲು ಕೇಂದ್ರ ಸರ್ಕಾರ ವಿವಿಧ ಕೋನಗಳಿಂದ ಪ್ರಯತ್ನ ನಡೆಸಿದ್ದರೂ 2012-13ನೇ ಹಣಕಾಸು ವರ್ಷದಲ್ಲಿನ ಗುರಿಯನ್ನು ಮುಟ್ಟಲಾಗಿಲ್ಲ.ಕಳೆದ ಹಣಕಾಸು ವರ್ಷದಲ್ಲಿ ಕೇವಲ 2242 ಕೋಟಿ ಅಮೆರಿಕನ್ ಡಾಲರ್(ರೂ. 1.23 ಲಕ್ಷ ಕೋಟಿ) `ಎಫ್‌ಡಿಐ' ಸಂಗ್ರಹಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಶೇ 38ರಷ್ಟು ಕಳಪೆ ಸಾಧನೆ ತೋರಿದೆ. 2011-12ರಲ್ಲಿ 3512 ಕೋಟಿ ಡಾಲರ್(ರೂ. 1.93 ಲಕ್ಷ ಕೋಟಿ) ಎಫ್‌ಡಿಐ ಸಂಗ್ರಹವಾಗಿತ್ತು.

ಪ್ರತಿಕ್ರಿಯಿಸಿ (+)