ಮಂಗಳವಾರ, ಜೂಲೈ 7, 2020
29 °C

ವಿದೇಶಿ ಪ್ರವಾಸಿಗರಿಂದ ರಂಗಿನಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದೇಶಿ ಪ್ರವಾಸಿಗರಿಂದ ರಂಗಿನಾಟ

ಗಂಗಾವತಿ:  ಹೋಳಿಹಬ್ಬ, ರಂಗಿನಾಟದ ಬಗ್ಗೆ ಕಲ್ಪನೆಯೇ ಇಲ್ಲದ ವಿದೇಶಿ ಪ್ರವಾಸಿಗರು ಬಣ್ಣಗಳ ಹಬ್ಬದ ಮೋಡಿಗೆ ಮನಸೋತರು.

ಇಲ್ಲಿಗೆ ಸಮೀಪದ ವಿರೂಪಾಪುರ ಗಡ್ಡೆಯಲ್ಲಿ ಭಾನುವಾರ ಸ್ಥಳೀಯರ ಒಡಗೂಡಿ ಓಕುಳಿಯಾಡಿ ಸಂಭ್ರಮಿಸಿದರು.ವಿವಿಧ ದೇಶಗಳ 500ಕ್ಕೂ ಹೆಚ್ಚು ಪ್ರವಾಸಿಗರು ಹೋಳಿ ಹಬ್ಬಕ್ಕೆ ರಂಗು ತುಂಬಿ, ಬಣ್ಣದ ಹೊಳೆಯಲ್ಲಿ ಮಿಂದೆದ್ದರು. ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಅಮೆರಿಕ, ಸ್ಪೇನ್, ಇಟಲಿ, ಇಸ್ರೇಲ್, ಅಫ್ಘಾನಿಸ್ತಾನ ಮೊದಲಾದ ದೇಶಗಳಿಂದ ಆಗಮಿಸಿದ್ದ ಪ್ರವಾಸಿಗರು ಮುಂಜಾನೆಯಿಂದಲೇ ಓಕುಳಿಯಾಟದಲ್ಲಿ ತೊಡಗಿದರು.ಗೋವನ್ ಕಾರ್ನಾರ್‌ನಿಂದ ಮೆರವಣಿಗೆ ಹೊರಟು ಐತಿಹಾಸಿಕ ಪಾದಸೇತುವೆ ತಿರುವಿನವರೆಗೂ ಸಂಗೀತಕ್ಕೆ ತಕ್ಕಂತೆ ನೃತ್ಯ, ಮೋಜು-ಮಸ್ತಿ ಮಾಡಿದ ವಿದೇಶಿಯರು ಬಳಿಕ ನದಿಗೆ ತೆರಳಿ ಸ್ನಾನ ಮುಗಿಸಿದರು. ವಿದೇಶಿ ಯುವ ಜೋಡಿಗಳು ಹೆಚ್ಚಾಗಿ ರಂಗಿನಾಟದಲ್ಲಿ ಪಾಲ್ಗೊಂಡಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.