ವಿದೇಶಿ ವಿನಿಮಯ ಉಳಿತಾಯ

7

ವಿದೇಶಿ ವಿನಿಮಯ ಉಳಿತಾಯ

Published:
Updated:

ನವದೆಹಲಿ (ಪಿಟಿಐ): ಇರಾನ್‌ನಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲ ಪ್ರಮಾಣ ಹೆಚ್ಚಿಸುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶಕ್ಕೆ 850 ಕೋಟಿ ಡಾಲರ್‌ಗಳಷ್ಟು ವಿದೇಶಿ ವಿನಿಮಯ ಉಳಿಯಲಿದೆ ಎಂದು ಕೇಂದ್ರ ತೈಲ ಸಚಿವ ಎಂ. ವೀರಪ್ಪ ಮೊಯಿಲಿ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.ಇರಾನ್‌ನಿಂದ ಆಮದು ಮಾಡಿಕೊಳ್ಳುವ ಕಚ್ಚಾತೈಲಕ್ಕೆ `ರೂಪಾಯಿ' ಮೂಲಕ ಪಾವತಿ ಮಾಡಿದರೆ ಸಾಕು. ಉಳಿದ ದೇಶಗಳಿಗೆ ಡಾಲರ್‌ನಲ್ಲಿ ಪಾವತಿ ಮಾಡಬೇಕಾಗುತ್ತದೆ. ಇರಾನ್‌ನಿಂದ ಈಗಾಗಲೇ 20 ಲಕ್ಷ ಟನ್‌ಗಳಷ್ಟು ಕಚ್ಚಾತೈಲ ಆಮದು ಮಾಡಿಕೊಳ್ಳಲಾಗಿದೆ. ಇದರ ಜತೆಗೆ ಈ ವರ್ಷ ಇನ್ನೂ 110 ಲಕ್ಷ ಟನ್‌ಗಳಷ್ಟು ತೈಲ  ಆಮದು ಮಾಡಿಕೊಳ್ಳುವ ಯೋಜನೆ ಇದೆ. ಇದರಿಂದ ದೇಶಕ್ಕೆ ಬೃಹತ್ ಪ್ರಮಾಣದಲ್ಲಿ ವಿದೇಶಿ ವಿನಿಮಯ ಉಳಿಯಲಿದೆ ಎಂದು ಅವರು ಹೇಳಿದ್ದಾರೆ.ಇರಾನ್‌ಗೆ ಕೋಲ್ಕತ್ತದಲ್ಲಿರುವ ಯೂಕೊ ಬ್ಯಾಂಕಿನ ಖಾತೆಯ ಮೂಲಕ ರೂಪಾಯಿಯಲ್ಲಿ ಹಣ ಪಾವತಿ ಮಾಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry