ವಿದೇಶಿ ವಿನಿಮಯ ಸಂಗ್ರಹ: 218 ಕೋಟಿ ಡಾಲರ್ ಕುಸಿತ

7

ವಿದೇಶಿ ವಿನಿಮಯ ಸಂಗ್ರಹ: 218 ಕೋಟಿ ಡಾಲರ್ ಕುಸಿತ

Published:
Updated:

ಮುಂಬೈ(ಪಿಟಿಐ): ದೇಶದಲ್ಲಿನ ವಿದೇಶಿ ವಿನಿಮಯ ಸಂಗ್ರಹದಲ್ಲಿ ಮೇ 4ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ 218.70 ಕೋಟಿ ಡಾಲರ್ ಕಡಿಮೆಯಾಗಿದೆ. ಸದ್ಯ ಒಟ್ಟು ವಿದೇಶಿ ವಿನಿಮಯ ಸಂಗ್ರಹ ಮೊತ್ತ 29317 ಕೋಟಿ ಅಮೆರಿಕನ್ ಡಾಲರ್‌ನಷ್ಟಿದೆ.ಭಾರತೀಯ ರಿಸರ್ವ್ ಬ್ಯಾಂಕ್ ಬಳಿಯ ಚಿನ್ನದ ಸಂಗ್ರಹದಲ್ಲಿಯೂ 40.52 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಚಿನ್ನ ಖಾಲಿಯಾಗಿದೆ. ಪರಿಣಾಮ ಸದ್ಯ 2661 ಕೋಟಿ ಡಾಲರ್ ಬೆಲೆಯ ಚಿನ್ನ ಇದೆ.  ಐಎಂಎಫ್ ನಿಧಿ ಪ್ರಮಾಣ 290 ಕೋಟಿ ಡಾಲರ್‌ಗೆ ಇಳಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry