ಸೋಮವಾರ, ಮೇ 17, 2021
28 °C

ವಿದೇಶಿ ವಿನಿಮಯ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಐಎಎನ್‌ಎಸ್): ಸೆಪ್ಟೆಂಬರ್ 2ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ದೇಶದ ವಿದೇಶಿ ವಿನಿಮಯ ಮೌಲ್ಯವು ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿದ್ದು, 320 ಶತಕೋಟಿ ಡಾಲರ್ (್ಙ1,4,40,000 ಕೋಟಿ) ಗಳಷ್ಟಾಗಿದೆ.ಸರ್ಕಾರ ಬಳಿ ಇರುವ ಚಿನ್ನದ ಮೀಸಲು ಮೌಲ್ಯವು  ಆಗಸ್ಟ್ ತಿಂಗಳಲ್ಲಿ 3 ಶತಕೋಟಿ ಡಾಲರ್ ( ರೂ13,500 ಕೋಟಿ) ಗಳಷ್ಟು ಹೆಚ್ಚಿರುವುದು  ವಿದೇಶಿ ವಿನಿಮಯದ ದಾಖಲೆ ಪ್ರಗತಿಗೆ ಕಾರಣವಾಗಿದೆ.ಚಿನ್ನದ ಮೌಲ್ಯವು ಕಳೆದ ತಿಂಗಳ 2.9 ಶತಕೋಟಿ ಡಾಲರ್‌ನಿಂದ ಸೆಪ್ಟೆಂಬರ್ 2ಕ್ಕೆ 28 ಶತಕೋಟಿ ಡಾಲರ್‌ಗಳಿಗೆ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಚಿನ್ನದ ಧಾರಣೆ ಕಳೆದ ವಾರ ಸಾರ್ವಕಾಲಿಕ ದಾಖಲೆ ಮಟ್ಟ ಔನ್ಸ್‌ಗೆ 1,921 ಡಾಲರ್ ತಲುಪಿತ್ತು. ಅಮೆರಿಕ ಮತ್ತು ಯೂರೋಪ್ ಒಕ್ಕೂಟದ ಸಾಲದ ಬಿಕ್ಕಟ್ಟು ಮತ್ತು ಜಾಗತಿಕ ಅರ್ಥಿಕ ಅಸ್ಥಿರತೆ ಹಿನ್ನೆಲೆಯಲ್ಲಿ `ಆರ್‌ಬಿಐ~ ತನ್ನ ಬಳಿ ಇರುವ ಚಿನ್ನದ ಮೀಸಲು ಪ್ರಮಾಣವನ್ನು ಇತ್ತೀಚೆಗೆ ಹೆಚ್ಚಿಸಿಕೊಂಡಿತ್ತು.ವಿದೇಶಿ ವಿನಿಮಯಕ್ಕೆ ದೊಡ್ಡ ಪ್ರಮಾಣದ ಕೊಡುಗೆ ನೀಡುವ `ವಿದೇಶಿ ಕರೆನ್ಸಿ ಸಂಪತ್ತು ಈ ಅವಧಿಯಲ್ಲಿ 1.32 ಶತಕೋಟಿ ಡಾಲರ್‌ಗಳಷ್ಟು ಇಳಿಕೆ ಕಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.