ವಿದೇಶಿ ಸಂಕ್ಷಿಪ್ತ ಸುದ್ದಿಗಳು

ಶನಿವಾರ, ಜೂಲೈ 20, 2019
24 °C

ವಿದೇಶಿ ಸಂಕ್ಷಿಪ್ತ ಸುದ್ದಿಗಳು

Published:
Updated:

ಭದ್ರತಾ ಮಂಡಳಿ ವಿಸ್ತರಣೆಗೆ ಆಗ್ರಹ

ವಿಶ್ವಸಂಸ್ಥೆ (ಪಿಟಿಐ):
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಬೇಗನೇ ವಿಸ್ತರಿಸಬೇಕೆಂದು ಭಾರತ ಆಗ್ರಹಿಸಿದೆ.

`ಭದ್ರತಾ ಮಂಡಳಿ ವಿಸ್ತರಣೆಗೆ ಇದು ಸಕಾಲವಾಗಿದೆ~  ಎಂದು  ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ`ಸಮಾನ ಸಹಭಾಗಿತ್ವ ಮತ್ತು ಭದ್ರತಾ ಮಂಡಳಿ ವಿಸ್ತರಣೆ~ ಕುರಿತ ವಿಶ್ವಸಂಸ್ಥೆ ಸದಸ್ಯ ದೇಶಗಳ 8ನೇ ಸುತ್ತಿನ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಟೊ ಅಧಿಕಾರದೊಂದಿಗೆ ಭದ್ರತಾ ಮಂಡಳಿಯಲ್ಲಿ ತನಗೆ ಶಾಶ್ವತ  ಸದಸ್ಯತ್ವ ನೀಡಬೇಕೆನ್ನುವ ಆಫ್ರಿಕಾದ ಬೇಡಿಕೆಯನ್ನು ಭಾರತ ಬೆಂಬಲಿಸುತ್ತದೆ ಎಂದರು.ಅತ್ಯಂತ ಸಣ್ಣ ನೊಣ ಪತ್ತೆ

ವಾಷಿಂಗ್ಟನ್ (ಪಿಟಿಐ):
ವಿಶ್ವದಲ್ಲಿಯೇ ಅತ್ಯಂತ ಚಿಕ್ಕ ನೊಣವನ್ನು ಥಾಯ್ಲೆಂಡ್‌ನಲ್ಲಿ ಪತ್ತೆ ಮಾಡಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.`ಕೇವಲ 0.4 ಮಿ.ಮೀ ಉದ್ದದ ಈ ನೊಣವು ಜೇನು ಹುಳುವಿಗಿಂತ ಐದು ಪಟ್ಟು ಚಿಕ್ಕದಿರುತ್ತದೆ. ಬರಿಗಣ್ಣಿನಿಂದ ಇದನ್ನು ನೋಡುವುದು ಕಷ್ಟ~ ಎಂದು ಲಾಸ್ ಏಂಜಲೀಸ್ ಪ್ರಾಂತ್ಯದಲ್ಲಿರುವ  ನೈಸರ್ಗಿಕ ಇತಿಹಾಸ ಮ್ಯೂಸಿಯಂನ ಬ್ರಿಯಾನ್ ಬ್ರೌನ್ ಹೇಳಿದ್ದಾರೆ. ಈ ಪುಟಾಣಿ ನೊಣದ ಎದುರು ಮನೆಯಲ್ಲಿ ಹಾರಾಡುವ ನೊಣಗಳು ದೈತ್ಯ ರೂಪದಲ್ಲಿ ಕಾಣಿಸುತ್ತವೆ.ಹತ್ಯೆ ಪ್ರಕರಣ: ಆರೋಪಿಗೆ ಶಿಕ್ಷೆ

ಮೆಲ್ಬರ್ನ್ (ಪಿಟಿಐ):
ಭಾರತೀಯ ಮೂಲದ ತನ್ನ ಗೆಳತಿ ಹಾಗೂ ಆಕೆಯ ಸಂಬಂಧಿಗಳಿಬ್ಬರನ್ನು ಕೊಲೆ ಮಾಡಿದ ಆರೋಪದ ಮೇಲೆ ಆಸ್ಟ್ರೇಲಿಯಾದ ವ್ಯಕ್ತಿಗೆ ಬ್ರಿಸ್‌ಬೇನ್ ಸುಪ್ರೀಂಕೋರ್ಟ್ 42 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. 2003ರಲ್ಲಿ ಮ್ಯಾಕ್ಸ್ ಸಿಕಾ ಎಂಬಾತ ಬ್ರಿಸ್‌ಬೇನ್‌ನಲ್ಲಿ ನೀಲಿಮಾ ಸಿಂಗ್ ಹಾಗೂ ಆಕೆಯ ಸಂಬಂಧಿಗಳಾದ ಕುನಾಲ್ ಸಿಂಗ್ ಮತ್ತು  ಸಿದ್ಧಿ ಸಿಂಗ್ ಅವರನ್ನು ಹತ್ಯೆ ಮಾಡಿದ್ದ. ಇಲ್ಲಿನ ಇತಿಹಾಸದಲ್ಲಿಯೇ ಅತ್ಯಂತ ದೀರ್ಘಕಾಲ ವಿಚಾರಣೆ ನಡೆದ ಈ ಪ್ರಕರಣದಲ್ಲಿ  ಮ್ಯಾಕ್ಸ್ ತಪ್ಪಿತಸ್ಥ ಎಂದು ಕೋರ್ಟ್ ಘೋಷಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry