ವಿದೇಶಿ ಸಂಕ್ಷಿಪ್ತ ಸುದ್ದಿಗಳು

7

ವಿದೇಶಿ ಸಂಕ್ಷಿಪ್ತ ಸುದ್ದಿಗಳು

Published:
Updated:

ಆತ್ಮಹತ್ಯಾ ದಾಳಿ: 19 ಸಾವು

ಇಸ್ಲಾಮಾಬಾದ್(ಪಿಟಿಐ)
: ವಾಯವ್ಯ ಪಾಕಿಸ್ತಾನದ ಖೈಬರ್ ಬುಡಕಟ್ಟು ಪ್ರದೇಶದಲ್ಲಿ ಸೋಮವಾರ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ 19 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಜನನಿಬಿಡ ಜಮ್ರುದ್ ಮಾರುಕಟ್ಟೆ ಬಳಿ ನಿಲ್ಲಿಸಿದ್ದ ಕಾರೊಂದರಿಂದ ಬಾಂಬ್ ಸ್ಫೋಟಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೃತದೇಹ ಮತ್ತು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ  ತರಲಾಯಿತು. ಯಾವ ಸಂಘಟನೆಯೂ ದಾಳಿಯ ಹೊಣೆ ಹೊತ್ತಿಕೊಂಡಿಲ್ಲ.ಸಾರ್ವಜನಿಕ ಭೇಟಿ

ಲಂಡನ್ (ಎಪಿ):
ಬೆಳಗಿನ ಬಳಲಿಕೆಯಿಂದ     (ಮಾರ್ನಿಂಗ್ ಸಿಕ್‌ನೆಸ್) ಇದೇ ತಿಂಗಳು 6ರಂದು ಆಸ್ಪತ್ರೆಗೆ ದಾಖಲಾಗಿದ್ದ ಯುವರಾಣಿ ಕೇಟ್ ಅವರು ಭಾನುವಾರ ಮೊದಲ ಬಾರಿಗೆ ಸಾರ್ವಜನಿಕರೆದುರು ಕಾಣಿಸಿಕೊಂಡರು. ಬಿಬಿಸಿ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಟ್ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿತ್ತು.ಬಾಂಬ್ ಸ್ಫೋಟ: 10 ಸಾವು

ಕಾಬೂಲ್ (ಐಎಎನ್‌ಎಸ್)
: ಇಲ್ಲಿನ ನಂಗರ್‌ಹಾರ್ ಪ್ರಾಂತ್ಯದಲ್ಲಿ ಸೋಮವಾರ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕನಿಷ್ಠ 10 ಮಕ್ಕಳು ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.`ಬೆಳಿಗ್ಗೆ ಸುಮಾರು 9ಗಂಟೆ ಹೊತ್ತಿನಲ್ಲಿ ಮಕ್ಕಳು ಉರುವಲು ಸಂಗ್ರಹಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ' ಎಂದು ಪೊಲೀಸರು ತಿಳಿಸಿದ್ದಾರೆ.ಸತ್ತವರೆಲ್ಲರೂ  ಎಂಟರಿಂದ ಹನ್ನೆರಡು ವರ್ಷದೊಳಗಿನವರಾಗಿದ್ದು, ಹೆಚ್ಚಿನವರು ಹೆಣ್ಣು ಮಕ್ಕಳು. ದಾಳಿಯಲ್ಲಿ ತಾಲಿಬಾನ್ ಕೈವಾಡವಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅಧಿಕಾರಿಗಳ ವಜಾ

ಕಠ್ಮಂಡು (ಪಿಟಿಐ)
: ನಿಷೇಧದ ಹೊರತಾಗಿಯೂ ಭಾರತದಿಂದ ಅಕ್ರಮವಾಗಿ ಕೋಳಿಗಳನ್ನು ಆಮದು ಮಾಡಿಕೊಳ್ಳಲು ಇಲ್ಲಿನ ಕೆಎಫ್‌ಸಿ ಪ್ರಾಯೋಜಿತ ಸಂಸ್ಥೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರ, ಇಬ್ಬರು ಅಧೀನ ಕಾರ್ಯದರ್ಶಿಗಳು ಸೇರಿದಂತೆ ಆರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿದೆ.ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಭಾರತದಿಂದ ಕೋಳಿಗಳನ್ನು ಆಮದು ಮಾಡಿಕೊಳ್ಳದಂತೆ ನಿಷೇಧ ಹೇರಲಾಗಿತ್ತು. ಆದರೂ ಕೆಎಫ್‌ಸಿ ಪ್ರಾಯೋಜಿತ ದೇವಯಾನಿ ಇಂಟರ್‌ನ್ಯಾಷನಲ್ ಸಂಸ್ಥೆಗೆ ಕೋಳಿ ಆಮದಿಗೆ ಅನುಮತಿ ನೀಡಿದ್ದಕ್ಕಾಗಿ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.`ವಿಶ್ವಸಂಸ್ಥೆ ನಿರ್ಣಯದಂತೆ ಪರಿಹಾರ'

ಇಸ್ಲಾಮಾಬಾದ್ (ಪಿಟಿಐ):
ವಿಶ್ವಸಂಸ್ಥೆಯ ನಿರ್ಣಯ ಮತ್ತು ಕಾಶ್ಮೀರ ಜನತೆಯ ಆಶೋತ್ತರಗಳನ್ನು ಆಧರಿಸಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಪಾಕಿಸ್ತಾನ ಬಯಸುವುದಾಗಿ ಪ್ರಧಾನಿ ರಾಜಾ ಪರ್ವೇಜ್ ಅಶ್ರಫ್ ಸೋಮವಾರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry