ಶುಕ್ರವಾರ, ನವೆಂಬರ್ 15, 2019
26 °C

ವಿದೇಶಿ ಸಂಕ್ಷಿಪ್ತ ಸುದ್ದಿಗಳು

Published:
Updated:

ಇಂಡೊನೇಷ್ಯಾದಲ್ಲಿ ಭಾರಿ ಭೂಕಂಪನ

ಜಯಪುರ, ಇಂಡೊನೇಷ್ಯಾ (ಎಎಫ್‌ಪಿ)
: ಪೂರ್ವ ಇಂಡೊನೇಷ್ಯಾದ ಪಪುವಾ ಪ್ರಾಂತ್ಯದಲ್ಲಿ ಶನಿವಾರ ಭಾರಿ ಪ್ರಮಾಣದ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆ ದಾಖಲಾಗಿದೆ.  ಭೂಕಂಪನವು 75 ಕಿ.ಮೀ. ಸಮುದ್ರದಾಳದಲ್ಲಿ ಘಟಿಸಿದ್ದು, ಸುನಾಮಿ ಸಂಭವಿಸುವ ಯಾವುದೇ ಮುನ್ಸೂಚನೆಗಳಿಲ್ಲ ಎಂದು ಅಮೆರಿಕದ ಭೂವಿಜ್ಞಾನ ಸರ್ವೇಕ್ಷಣಾಲಯ ತಿಳಿಸಿದೆ.ಸ್ಥಳೀಯ ಭೂಕಂಪಶಾಸ್ತ್ರಜ್ಞರು 7.2ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಹೇಳಿದ್ದಾರೆ.`ಸುರಸುಂದರಿ': ಒಬಾಮ ಕ್ಷಮೆಯಾಚನೆ

ವಾಷಿಂಗ್ಟನ್ (ಪಿಟಿಐ):
ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಕಮಲಾ ಹ್ಯಾರಿಸ್ `ಸುರಸುಂದರಿ' ಮತ್ತು `ತೀಕ್ಷ್ಣಮತಿ' ಎಂಬ ತಮ್ಮ ವಿವಾದಾಸ್ಪದ ಹೇಳಿಕೆಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಕ್ಷಮೆಯಾಚಿಸಿದ್ದಾರೆ. ಒಬಾಮ ಅವರು ಹ್ಯಾರಿಸ್ ಅವರಿಗೆ ದೂರವಾಣಿ ಕರೆ ಮಾಡಿ ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೇ ಕಾರ್ನಿ ತಿಳಿಸಿದ್ದಾರೆ.ಲಂಕಾ-ಪಾಕ್ ರಕ್ಷಣಾ ಒಪ್ಪಂದ

ಕೊಲಂಬೊ (ಪಿಟಿಐ):
ರಕ್ಷಣಾ, ವ್ಯಾಪಾರ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಶ್ರೀಲಂಕಾ ಮತ್ತು ಪಾಕಿಸ್ತಾನ ಪರಸ್ಪರ ಸಹಕರಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಭಯೋತ್ಪಾದಕ ಚಟುವಟಿಕೆಗಳ ಮೇಲೆ ನಿಯಂತ್ರಣ, ಗಡಿಯಾಚೆಗಿನ ಅಪರಾಧ ಮತ್ತು ಭದ್ರತಾ ಸಿಬ್ಬಂದಿಗೆ ತರಬೇತಿ ನೀಡುವ ಬಗ್ಗೆ ಎರಡೂ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪ್ರತಿಕ್ರಿಯಿಸಿ (+)