ಶನಿವಾರ, ನವೆಂಬರ್ 23, 2019
18 °C

ವಿದೇಶಿ ಸಂಕ್ಷಿಪ್ತ ಸುದ್ದಿಗಳು

Published:
Updated:

ಅನ್ಯಗ್ರಹಗಳಲ್ಲಿ ಜೀವಿಗಳು?

ವಾಷಿಂಗ್ಟನ್ (ಪಿಟಿಐ):
ನಾಸಾದ ಜೇಮ್ಸ ವೆಬ್ ಸ್ಪೇಸ್ ಟೆಲಿಸ್ಕೋಪ್ ನಶಿಸಿದ ನಕ್ಷತ್ರಗಳ ಸುತ್ತ ಸುತ್ತುವ ಕೆಲವು ಗ್ರಹಗಳಲ್ಲಿ ಜೀವದ ಕುರುಹುಗಳನ್ನು ಪತ್ತೆ ಹಚ್ಚಿದೆ.ಶಕ್ತಿಯ ಮೂಲ ಇಲ್ಲದ ಕಾರಣ ನಶಿಸಿದ ನಕ್ಷತ್ರಗಳ ಕಕ್ಷೆಯಲ್ಲಿರುವ ಗ್ರಹಗಳಲ್ಲಿ ಮೇಲ್ನೋಟಕ್ಕೆ ಕಂಡುಬಂದಿರುವ ಪರಿಸರದಿಂದ ಒಂದು ಕಾಲಕ್ಕೆ ಅಲ್ಲಿ ಜೀವಿಗಳಿದ್ದರಬಹುದು ಎಂಬ ವಿಷಯವನ್ನು ಈ ಯಂತ್ರ ಕಂಡುಹಿಡಿದಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ನಾಸಾ 2018ರಲ್ಲಿ ಈ ಶಕ್ತಿಶಾಲಿ ದೂರದರ್ಶಕ ಯಂತ್ರವನ್ನು ಬಾಹ್ಯಾಕಾಶಕ್ಕೆ ಕಳಿಸಲಿದೆ ಎಂದು ಟೆಲ್ ಅವಿವ್ ವಿಶ್ವವಿದ್ಯಾಲಯದ ಖಗೋಳ ಭೌತವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾನ್ ಮಾವೋಜ್ ಹೇಳಿದ್ದಾರೆ.ಸವಿತಾ ತಂದೆಯ ಆರೋಪ

ಲಂಡನ್ (ಪಿಟಿಐ):
ಸವಿತಾ ಹಾಲಪ್ಪನವರ ಸಾವಿಗೆ ಸಂಬಂಧಿಸಿ ನಡೆಸಲಾಗುತ್ತಿರುವ ತನಿಖೆಯಿಂದ ತೃಪ್ತರಾಗದ ತಾವು ಗಾಲ್ವೆ ಆಸ್ಪತ್ರೆಯ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಆಕೆಯ ತಂದೆ ಆನಂದಪ್ಪ ಯಾಳಗಿ ತಿಳಿಸಿದ್ದಾರೆ.

`ಐರಿಷ್ ಸರ್ಕಾರದಿಂದ ನಮಗೆಂದೂ ನ್ಯಾಯ ದೊರಕದು. ಹಾಗಾಗಿ ನಾವು ನ್ಯಾಯಾಲಯದಲ್ಲಿ ದೂರು ಸಲ್ಲಿಸುವುದಾಗಿ' ಅವರು ತಿಳಿಸಿದರು.ಕಾರಲ್ಲಿ ಸ್ಫೋಟಕ ಸಾಧನ

ಮನಿಲಾ (ಎಪಿಎಫ್):
ಭಾರತೀಯ ಉದ್ಯಮಿಯೊಬ್ಬರ ಕಾರಿನಲ್ಲಿ ಶಕ್ತಿಶಾಲಿ ಸ್ಫೋಟಕ ಸಾಧನ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.ಕಾರು ದುರಸ್ತಿ ಮಾಡುತ್ತಿದ್ದ ವೇಳೆ ಎಂಜಿನ್ ಕಂಪಾರ್ಟ್‌ಮೆಂಟ್‌ನಲ್ಲಿ ಸ್ಫೋಟಕ ಉಪಕರಣ ಪತ್ತೆಯಾಗಿದ್ದು ಈ ವಿಷಯವನ್ನು ಕೂಡಲೇ ಮೆಕ್ಯಾನಿಕ್ ಪೊಲೀಸರಿಗೆ ತಿಳಿಸಿದ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.ಭಾರತೀಯ ಚಾಲಕನ ಹತ್ಯೆ

ಕ್ವಾಲಾಲಂಪುರ (ಪಿಟಿಐ
): ಭಾರತೀಯ ಮೂಲದ ಕಾರು ಚಾಲಕನನ್ನು ಆತನ ಕುಟುಂಬದ ಎದುರೇ ಮುಸುಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹತ್ಯೆಯಾದ ವ್ಯಕ್ತಿಯನ್ನು ಶಿವ ಎಂದು ಗುರುತಿಸಲಾಗಿದೆ. ಆತ ತನ್ನ ಪತ್ನಿ ಹಾಗೂ ಎಂಟು ವರ್ಷದ ಮಗಳೊಂದಿಗೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತ್ದ್ದಿದಾಗ ಅಲ್ಲಿಗೆ ಬಂದ ಇಬ್ಬರು ಮುಸುಕುಧಾರಿಗಳು ಗುಂಡಿನ ಮಳೆಗರೆದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರತಿಕ್ರಿಯಿಸಿ (+)