ವಿದೇಶಿ ಸಂಕ್ಷಿಪ್ತ ಸುದ್ದಿ

7

ವಿದೇಶಿ ಸಂಕ್ಷಿಪ್ತ ಸುದ್ದಿ

Published:
Updated:

ಡ್ರೋಣ್: ಐವರು ಉಗ್ರರ ಹತ್ಯೆ

ಇಸ್ಲಾಮಾಬಾದ್ (ಪಿಟಿಐ):
ಪಾಕಿಸ್ತಾನದ ಉತ್ತರ ವಜಿರಿಸ್ತಾನ ಗುಡ್ಡಗಾಡು ಪ್ರದೇಶದ ಕಟ್ಟಡಗಳ ಆವರಣ ಮತ್ತು ವಾಹನಗಳನ್ನು ಗುರಿಯಾಗಿಟ್ಟುಕೊಂಡು ಸೋಮವಾರ ಅಮೆರಿಕ ನಡೆಸಿದ ಡ್ರೋಣ್ ದಾಳಿಯಲ್ಲಿ ಐವರು ಉಗ್ರರು ಹತ್ಯೆಯಾಗಿದ್ದಾರೆ.ಅಮೆರಿಕ ಪ್ರವಾಸ ರದ್ದು

ಇಸ್ಲಾಮಾಬಾದ್ (ಪಿಟಿಐ): ಅಮೆರಿಕ ಮತ್ತು ಪಾಕ್ ನಡುವಿನ ಸಂಬಂಧಕ್ಕೆ ಹಿನ್ನಡೆಯಾಗಿದ್ದರಿಂದ ಐಎಸ್‌ಐ ಹೊಸ ಮುಖ್ಯಸ್ಥ  ಜಹಿರ್ -ಉಲ್- ಇಸ್ಲಾಂ ಅವರು ಈ ವಾರ ನೀಡಬೇಕಿದ್ದ ವಾಷಿಂಗ್ಟನ್ ಭೇಟಿ ರದ್ದಾಗಿದೆ. ಆದರೆ ಭೇಟಿ ರದ್ದಾಗಿರುವುದಕ್ಕೆ ನಿಖರ ಕಾರಣ ಗೊತ್ತಾಗಿಲ್ಲ.ಆಸ್ತಿ ವಿಸ್ತರಣೆ: ವಿದೇಶಿಗರಿಗೆ ಅವಕಾಶ

ದುಬೈ (ಪಿಟಿಐ): ಒಮನ್‌ನಲ್ಲಿ ವ್ಯವಹಾರ ನಡೆಸುತ್ತಿರುವ ವಿದೇಶಿ ಕಂಪೆನಿಗಳು ಮತ್ತು ವಲಸಿಗರು ಇನ್ನು ಮುಂದೆ ಈಗಿರುವ ಆಸ್ತಿಯನ್ನು ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ.ಸಂವಿಧಾನ ತಿದ್ದುಪಡಿಯ ನಂತರ ಸಂಬಂಧಪಟ್ಟ ಸಚಿವಾಲಯವು ಈ ಅಧಿಕೃತ ಆದೇಶ ಹೊರಡಿಸಿದೆ. ಒಮನ್‌ನಲ್ಲಿ ನೆಲೆಸಿರುವ ವಿದೇಶಿಗರು ಆಸ್ತಿಯನ್ನು ವಿಸ್ತರಿಸಲು ಅವಕಾಶ ಕಲ್ಪಿಸಿದ್ದರೂ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.ಆಸ್ತಿ ವಿಸ್ತರಣೆ ಅಗತ್ಯವಾಗಿದೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಮತ್ತು ವಸತಿ ಸಚಿವಾಲಯವು ನಿಗದಿಪಡಿಸಿರುವ ಬೆಲೆಯಲ್ಲೇ ಭೂಮಿಯನ್ನು ಖರೀದಿಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ ಎಂದು `ಟೈಮ್ಸ ಆಫ್ ಒಮನ್~ ವರದಿ ಮಾಡಿದೆ.ಬಾಂಬ್ ದಾಳಿ: ಇಬ್ಬರ ಸಾವು

ಬ್ಯಾಂಕಾಕ್(ಐಎಎನ್‌ಎಸ್):  ಥಾಯ್ಲೆಂಡ್‌ನಲ್ಲಿ ಸೋಮವಾರ ಬಾಂಬ್ ದಾಳಿಯಲ್ಲಿ ಇಬ್ಬರು ರಕ್ಷಣಾ ಸ್ವಯಂಸೇವಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆತ್ಮಾಹುತಿ ಪ್ರತಿಭಟನೆ

ಬೀಜಿಂಗ್ (ಪಿಟಿಐ): ಚೀನಾ ಸರ್ಕಾರದ ವಿರುದ್ಧದ ಆತ್ಮಾಹುತಿ ಪ್ರತಿಭಟನೆ ಈಗ ಲಾಸಾಕ್ಕೂ ಹಬ್ಬಿದ್ದು ಅಲ್ಲಿನ ದೇವಸ್ಥಾನವೊಂದರ ಎದುರಿನಲ್ಲಿ  ಆತ್ಮಾಹುತಿಗೆ ಯತ್ನಿಸಿದ ಇಬ್ಬರು ಟಿಬೆಟನ್ನರ ಪೈಕಿ ಒಬ್ಬ ಯುವಕ ಸತ್ತಿದ್ದಾನೆ.  ಈ ಯುವಕರು ಲಾಸಾದ ಪರಗೊರ ಬೀದಿಯಲ್ಲಿ ಭಾನುವಾರ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಪ್ರತಿಭಟನೆ ನಡೆಸಿದರು.ಅರ್ಜೆಂಟಿನಾದಲ್ಲಿ ಲಘು ಭೂಕಂಪನ

ವಾಷಿಂಗ್ಟನ್ (ಐಎಎನ್‌ಎಸ್): ಉತ್ತರ ಅರ್ಜೆಂಟಿನಾದ  ಸೆಂಟಿಯಾಗೊ ಡೆಲ್ ಎಸ್ಟಿರೊ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಲಘು ಭೂಕಂಪನ ಉಂಟಾಗಿದೆ ಎಂದು ಅಮೆರಿಕ ಭೂವಿಜ್ಞಾನ ಸಮೀಕ್ಷೆ(ಯುಎಸ್‌ಜಿಎಸ್) ತಿಳಿಸಿದೆ.  ರಿಕ್ಟರ್ ಮಾಪನದಲ್ಲಿ ಭೂಕಂಪನದ ತೀವ್ರತೆ 6.4ರಷ್ಟು ದಾಖಲಾಗಿದ್ದು ಯಾವುದೇ ಅನಾಹುತದ ಬಗ್ಗೆ ವರದಿಯಾಗಿಲ್ಲ.ಅಸ್ಸಾಂಜ್ ಹಸ್ತಾಂತರ: ನಾಳೆ ತೀರ್ಪು

ಲಂಡನ್ (ಎಎಫ್‌ಪಿ): 
ವಿಕಿಲೀಕ್ಸ್ ಸ್ಥಾಪಕ ಜುಲಿಯನ್ ಅಸ್ಸಾಂಜ್ ಅವರನ್ನು ಬ್ರಿಟನ್‌ನಿಂದ ಸ್ವೀಡನ್‌ಗೆ ಹಸ್ತಾಂತರಿಸುವುದಕ್ಕೆ ಸಂಬಂಧಿಸಿದ ತೀರ್ಪು ಬುಧವಾರ ಹೊರಬೀಳುವ ನಿರೀಕ್ಷೆ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry