ವಿದೇಶಿ ಸಾಂಸ್ಥಿಕ ಹೂಡಿಕೆ ರೂ 57,958 ಕೋಟಿ!

ಗುರುವಾರ , ಮೇ 23, 2019
26 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ವಿದೇಶಿ ಸಾಂಸ್ಥಿಕ ಹೂಡಿಕೆ ರೂ 57,958 ಕೋಟಿ!

Published:
Updated:

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ದೇಶೀಯ ಷೇರುಪೇಟೆಗೆ 11.4 ಶತಕೋಟಿ ಡಾಲರ್‌ಗಳಷ್ಟು (ರೂ57,958 ಕೋಟಿ) ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಐಐ) ಹರಿದು ಬಂದಿದೆ ಎಂದು ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ `ಸೆಬಿ~ ಹೇಳಿದೆ. ಕಳೆದ ಕೆಲವು ವಾರಗಳಿಂದ ಮುಂಬೈ ಷೇರು ಪೇಟೆ ಚೇತರಿಕೆಯ ಹಾದಿಯಲ್ಲಿರುವುದು ಮತ್ತು ಸರ್ಕಾರ ಕೆಲವು ಮಹತ್ವದ ಆರ್ಥಿಕ ಸುಧಾರಣೆಗಳಿಗೆ ಮುಂದಾಗಿರುವುದು `ಎಫ್‌ಐಐ~ ಚಟುವಟಿಕೆ ಚುರುಕುಗೊಳ್ಳುವಂತೆ ಮಾಡಿದೆ  ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.ಆಗಸ್ಟ್ ತಿಂಗಳಲ್ಲಿ ಇದುವರೆಗೆ `ಎಫ್‌ಐಐ~ ಹೂಡಿಕೆದಾರರು ರೂ5,692 ಕೋಟಿ ನಿವ್ವಳ ಹೂಡಿಕೆ ಮಾಡಿದ್ದಾರೆ. ಮುಂಗಾರು ವೈಫಲ್ಯ, ಜಾಗತಿಕ ಆರ್ಥಿಕ ಅಸ್ಥಿರತೆ, ಗರಿಷ್ಠ ಬಡ್ಡಿ ದರ ಹೀಗೆ ಹಲವು ಪ್ರತಿಕೂಲ ಸಂಗತಿಗಳಿದ್ದರೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮುಂಬೈ ಷೇರು ಪೇಟೆಯಲ್ಲಿ ಹೆಚ್ಚಿನ ವಿಶ್ವಾಸ ಹೊಂದಿದ್ದಾರೆ. ಬಹುಬ್ರಾಂಡ್ ಚಿಲ್ಲರೆ  ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಅವಕಾಶ ಸೇರಿದಂತೆ ಸರ್ಕಾರ ಹಲವು  ಸುಧಾರಣೆ ಕ್ರಮ ಕೈಗೊಳ್ಳಲಿದೆ ಎನ್ನುವ ಭರವಸೆಯೇ `ಎಫ್‌ಐಐ~ ಚಟುವಟಿಕೆ ಹೆಚ್ಚಲು ಪ್ರಮುಖ ಕಾರಣ ಎನ್ನುತ್ತಾರೆ ರೆಲಿಗೇರ್ ಸೆಕ್ಯುರಿಟೀಸ್‌ನ ಮುಖ್ಯಸ್ಥ ರಾಜೇಶ್ ಜೈನ್.ಸರ್ಕಾರ ಹೊಸ ಆರ್ಥಿಕ ನೀತಿ ಪ್ರಕಟಿಸುತ್ತಿದ್ದಂತೆ `ಎಫ್‌ಐಐ~ ಚಟುವಟಿಕೆಗಳು ಇನ್ನಷ್ಟು ತೀವ್ರಗೊಳ್ಳಲಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದಿರುವುದು ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸ್ಥಿರಗೊಂಡಿರುವುದು ಮಾರುಕಟ್ಟೆಗೆ ಉತ್ತೇಜನ ನೀಡಿದೆ~ ಎಂದು `ಬಿಎನ್‌ಪಿ~ ಷೇರು ದಲ್ಲಾಳಿ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಅಲೆಕ್ಸ್ ಮಾಥ್ಯೂಸ್ ಅಭಿಪ್ರಾಯಪಟ್ಟಿದ್ದಾರೆ.ಮೃದು ಧೋರಣೆ ಕಾರಣ

ತರಿಗೆ ತಪ್ಪಿಸುವ ಪ್ರವೃತ್ತಿ ತಡೆ ಸಾಮಾನ್ಯ ನಿಯಮ (ಜಿಎಎಆರ್) ಜಾರಿಗೆ  ಸಂಬಂಧಿಸಿದಂತೆ ಸರ್ಕಾರ ಮೃದು ಧೋರಣೆ ತಳೆದಿರುವುದು `ಎಫ್‌ಐಐ~ ಹೂಡಿಕೆ ದಿಢೀರನೆ ಹೆಚ್ಚಲು ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಹಿಂದೆ ಸರ್ಕಾರ `ಜಿಎಎಆರ್~ ಜಾರಿಗೆ ಮುಂದಾದಾಗ ಸೂಚ್ಯಂಕ ಪಾತಾಳಕ್ಕೆ ಜಾರಿದನ್ನು ಇಲ್ಲಿ ಸ್ಮರಿಸಬಹುದು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry