ಸೋಮವಾರ, ಏಪ್ರಿಲ್ 12, 2021
29 °C

ವಿದೇಶಿ ಹಣ: ಜಗನ್ ವಿಚಾರಣೆಗೆ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಒಡೆತನದ ಉದ್ಯಮಗಳಿಗೆ ವಿದೇಶಿ ಹಣ ಸಂದಾಯವಾಗುತ್ತಿರುವ ಆರೋಪದ ಕುರಿತು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಸ್ಥಳೀಯ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ.ರೆಡ್ಡಿ ಪರ ವಕೀಲರ ಸಮ್ಮುಖದಲ್ಲಿ ವಿಚಾರಣೆಯನ್ನು ಶನಿವಾರದಿಂದಲೇ ಕೈಗೆತ್ತಿಕೊಳ್ಳಲಾಗುತ್ತಿದ್ದು, ಈ ತಿಂಗಳ 21ರತನಕ ನಡೆಯಲಿದೆ ಎಂದು ನಿರ್ದೇಶನಾಲಯದ ವಕೀಲ ಸುಬ್ಬಾ ರಾವ್ ತಿಳಿಸಿದರು.ಇದಕ್ಕೂ ಮೊದಲು ಕೋರ್ಟ್, ರೆಡ್ಡಿ ಹಾಗೂ ನಿರ್ದೇಶನಾಲಯದ ವಾದವನ್ನು ಆಲಿಸಿದ್ದು, ಈ ಸಂಬಂಧ ಆದೇಶವನ್ನು ಶುಕ್ರವಾರದವರೆಗೆ ಕಾದಿರಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.