ವಿದೇಶಿ ಹೂಡಿಕೆದಾರರ ನಿರೀಕ್ಷೆ: ಮಲ್ಯ

7
ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಆಶಾವಾದ

ವಿದೇಶಿ ಹೂಡಿಕೆದಾರರ ನಿರೀಕ್ಷೆ: ಮಲ್ಯ

Published:
Updated:
ವಿದೇಶಿ ಹೂಡಿಕೆದಾರರ ನಿರೀಕ್ಷೆ: ಮಲ್ಯ

ಬೆಂಗಳೂರು: ಆರ್ಥಿಕವಾಗಿ ಭಾರಿ ಸಂಕ ಷ್ಟದಲ್ಲಿರುವ ಕಿಂಗ್‌ಫಿಶರ್‌ ಏರ್‌ಲೈನ್‌ ಕಂಪೆನಿಯಲ್ಲಿ  ದೊಡ್ಡ ಮೊತ್ತದ ಹಣ ತೊಡಗಿಸಲು ವಿದೇಶಿ ಹೂಡಿಕೆದಾರ ರೊಬ್ಬರು ಮುಂದೆ ಬಂದಿದ್ದಾರೆ.ನಗರದಲ್ಲಿ ಮಂಗಳವಾರ ಕಂಪೆನಿಯ ವಾರ್ಷಿಕ ಮಹಾಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿದ ಕಿಂಗ್‌ಫಿಶರ್‌ ಏರ್‌ಲೈನ್ಸ್ ಲಿ. ಅಧ್ಯಕ್ಷ ವಿಜಯ್‌ ಮಲ್ಯ,  ವಿದೇಶಿ ಹೂಡಿಕೆದಾರರೊಬ್ಬರು ಕಂಪೆನಿ ಯಲ್ಲಿ ಹಣ ತೊಡಗಿಸಲು ಉತ್ಸುಕರಾಗಿ ದ್ದಾರೆ. ಈ ಸಂಬಂಧ ಮಾತುಕತೆ ನಡೆ ದಿದ್ದು, ಮುಂದಿನ 90 ದಿನಗಳಲ್ಲಿ ಅಂತಿ ಮಗೊಳ್ಳುವ ಸಾಧ್ಯತೆ ಇದೆ. ಇದರಿಂದ ಕಂಪೆನಿಗೆ ಹೆಚ್ಚಿನ ಒಳಿತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಹೂಡಿಕೆದಾರರು ಮತ್ತು ಅವರು ತೊಡಗಿಸಲಿರುವ ಹಣದ ಪ್ರಮಾಣ ಕುರಿತು ವಿವರ ನೀಡಲು ನಿರಾಕರಿಸಿದ ಮಲ್ಯ, ಅದೆಲ್ಲವೂ ಬಹಳ ಸೂಕ್ಷ್ಮ ವಿಚಾರ ಹಾಗೂ ರಹಸ್ಯ ಕಾಪಾಡಿಕೊಳ್ಳಬೇಕಾದ ಒಪ್ಪಂದಕ್ಕೊಳಪಟ್ಟಿದೆಎಂದರು.ವಿಮಾನಯಾನ ಪುನರಾರಂಭ ಕುರಿತ ಸುದ್ದಿಗಾರರ ಪ್ರಶ್ನೆಗೆ, ‘ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಯಲ’ಕ್ಕೆ (ಡಿಜಿಸಿಎ) ಮೂರು ಯೋಜನಾ ವರದಿ ಗಳನ್ನು ಸಲ್ಲಿಸಲಾಗಿದೆ. ಅಲ್ಲಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಿವರ ವಾದ ಅಧ್ಯಯನದ ನಂತರ ‘ಡಿಜಿಸಿಎ’ ಸೂಕ್ತ ಮಾರ್ಗದರ್ಶನ ನೀಡುವ ನಿರೀಕ್ಷೆ ಇದೆ ಎಂದು ಉತ್ತರಿಸಿದರು.ವರ್ಷಕ್ಕೂ ಹೆಚ್ಚು ಸಮಯದಿಂದ ವಿಮಾನಗಳ ಹಾರಾಟ ಸ್ಥಗಿತಗೊಳಿಸಿ ರುವ ಕಿಂಗ್‌ಫಿಶರ್‌ ₨7000 ಕೋಟಿಗೂ ಅಧಿಕ ಮೊತ್ತದ ಬ್ಯಾಂಕ್‌ ಸಾಲ ಬಾಕಿ ಉಳಿಸಿಕೊಂಡಿದೆ. ಒಟ್ಟಾರೆ ₨16,000 ಕೋಟಿಗೂ ಅಧಿಕ ನಷ್ಟ ಅನುಭವಿಸಿದೆ.ಎಂಸಿಎಫ್‌ ಶೇ 12 ಲಾಭಾಂಶ

ನಂತರ ಅದೇ ಸಭಾಂಗಣದಲ್ಲಿ ನಡೆದ ಮಂಗಳೂರು ಕೆಮಿಕಲ್ಸ್‌ ಅಂಡ್‌ ಫರ್ಟಿ ಲೈಸರ್ಸ್‌ ಲಿ.(ಎಂಸಿಎಫ್‌) ಷೇರುದಾ ರರ ಮಹಾಸಭೆಯಲ್ಲಿ 2012–13ನೇ ಹಣಕಾಸು ವರ್ಷಕ್ಕೆ ಶೇ 12 ಲಾಭಾಂಶ ವನ್ನು ಪ್ರಕಟಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry