ವಿದೇಶಿ ಹೂಡಿಕೆ 49 ಪ್ರಸ್ತಾವನೆ

7

ವಿದೇಶಿ ಹೂಡಿಕೆ 49 ಪ್ರಸ್ತಾವನೆ

Published:
Updated:

ನವದೆಹಲಿ(ಪಿಟಿಐ): ಮಹಿಂದ್ರಾ ಸಮೂಹ ಮತ್ತು ಎಲ್ ಅಂಡ್ ಟಿ ಕಂಪೆನಿಗಳಿಗೆ ಸಂಬಂಧಿಸಿದ್ದೂ ಸೇರಿದಂತೆ `ವಿದೇಶಿ ನೇರ ಹೂಡಿಕೆ~ಯ ಒಟ್ಟು 49 ಪ್ರಸ್ತಾವನೆಗಳು ಮುಂದಿನ ಶುಕ್ರವಾರ ನಡೆಯಲಿರುವ `ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ~(ಎಫ್‌ಐಪಿಬಿ) ಸಭೆಯಲ್ಲಿ ಚರ್ಚೆ ಬರಲಿವೆ.`ಎಫ್‌ಐಪಿಬಿ~ಯ ಹಿಂದಿನ ಸಭೆಯಲ್ಲಿ  ರೂ. 113.35 ಕೋಟಿ ಮೊತ್ತದ ವಿದೇಶಿ ನೇರ ಹೂಡಿಕೆಯ 14 ಪ್ರಸ್ತಾವನೆಗಳಿಗೆ ಅನುಮೋದನೆ ದೊರಕಲಿದೆ. ಅ. 19ರಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅರವಿಂದ್ ಮಾಯಾರಾಂ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮಂಡಳಿಯ 182ನೇ ಸಭೆಯಲ್ಲಿ ಚರ್ಚೆಗೆ ಬರಲಿರುವುದರಲ್ಲಿ 16 ಹೊಸ ಪಸ್ತಾವನೆಗಳಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry