ವಿದೇಶ ಪ್ರವಾಸ: ಪ್ರತಿಭಾ ಸಮರ್ಥನೆ

7

ವಿದೇಶ ಪ್ರವಾಸ: ಪ್ರತಿಭಾ ಸಮರ್ಥನೆ

Published:
Updated:

ರಾಷ್ಟ್ರಪತಿ ವಿಶೇಷ ವಿಮಾನ (ಪಿಟಿಐ): ವ್ಯಾಪಕ ಟೀಕೆಗಳ ಹೊರತಾಗಿಯೂ ದಕ್ಷಿಣ ಆಫ್ರಿಕಾ ಮತ್ತು ಸೀಷೆಲ್ಸ್ ರಾಷ್ಟ್ರಗಳ 9 ದಿನಗಳ ಪ್ರವಾಸ ಮುಗಿಸಿ ಹಿಂದಿರುಗಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮತ್ತೊಮ್ಮೆ ತಮ್ಮ ವಿದೇಶ ಪ್ರವಾಸವನ್ನು ಸಮರ್ಥಿಸಿಕೊಂಡಿದ್ದಾರೆ.ಪ್ರವಾಸ ಮುಗಿಸಿ ಹಿಂದಿರುಗುವಾಗ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕೃತ ಪ್ರವಾಸದ ಬಗ್ಗೆ ಸರ್ಕಾರ ವಿವರಣೆ ನೀಡಿದ ಹೊರತಾಗಿಯೂ ಆ ಕುರಿತು ಟೀಕೆಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಾರ್ವಜನಿಕವಾಗಿ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು. `ರಾಷ್ಟ್ರಪತಿ ತಮ್ಮಂದಿಗೆ ವಾಣಿಜ್ಯ ನಿಯೋಗವನ್ನು ಕರೆದೊಯ್ಯುವ ಸಂಪ್ರದಾಯ ಆರಂಭಿಸಿದ ಶ್ರೇಯ ನನಗೆ ಸಲ್ಲಬೇಕು. ವಾಣಿಜ್ಯ ನಿಯೋಗವನ್ನು ಕರೆದೊಯ್ಯುವ ಮೂಲಕ ವಿದೇಶಗಳಲ್ಲಿ ನಮ್ಮ ದೇಶದ ಆರ್ಥಿಕ ಅಭಿವೃದ್ಧಿಯನ್ನು ಸಮರ್ಥವಾಗಿ ಬಿಂಬಿಸಲು ಸಾಧ್ಯವಾಯಿತು~ ಎಂದರು.ಜುಲೈನಲ್ಲಿ ಅಧಿಕಾರದ ಅವಧಿ ಕೊನೆಗೊಳ್ಳಲಿದ್ದು, ನಿವೃತ್ತಿಯ ನಂತರ ಎಲ್ಲಿ ನೆಲೆ ನಿಲ್ಲಬೇಕು ಎಂಬ ಬಗ್ಗೆ ತಾವು ಇನ್ನೂ ನಿರ್ಧರಿಸಿಲ್ಲ ಎಂದು ಪ್ರತಿಭಾ ಇದೇ ವೇಳೆ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry