ವಿದೇಶ ಸಂಕ್ಷಿಪ್ತ ಸುದ್ದಿ

7

ವಿದೇಶ ಸಂಕ್ಷಿಪ್ತ ಸುದ್ದಿ

Published:
Updated:ವಿಮಾನ ಅಪಘಾತ: ನಾಲ್ವರ ಸಾವು


ದುಬೈ (ಪಿಟಿಐ): ಇಲ್ಲಿನ ಅಲ್ ಅನ್ ವಿಮಾನನಿಲ್ದಾಣದಿಂದ ರಿಯಾದ್‌ಗೆ ತೆರಳುತ್ತಿದ್ದ ಪ್ರಯಾಣಿಕರ ವಿಮಾನವೊಂದು ಗಗನಕ್ಕೇರಿದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾದ ಪರಿಣಾಮ ನಾಲ್ಕು ಮಂದಿ ಸಾವಪ್ಪಿದ್ದಾರೆ.ಅನಿವಾಸಿ ಭಾರತೀಯನ ಸಾವು: ಇಬ್ಬರ ಬಂಧನ

ಲಂಡನ್, (ಪಿಟಿಐ): ಅನಿವಾಸಿ ಭಾರತೀಯ 21ರ ಹರೆಯದ ಗಗನ್‌ದೀಪ್ ಸಿಂಗ್ ಅವರ ಸಾವಿಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕಾಂಗೋ ಅಧ್ಯಕ್ಷರ ಭವನದ ಮೇಲೆ ದಾಳಿ

ಕಿನ್‌ಹಾಸಾ (ಕಾಂಗೋ), (ಎಪಿ): ಕಾಂಗೋ ಅಧ್ಯಕ್ಷರ ಭವನದ ವೇಳೆ ದಾಳಿಕೋರರು ನಡೆಸಿದ ಆಕ್ರಮಣದಲ್ಲಿ  9 ಮಂದಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ವಕ್ತಾರರು ತಿಳಿಸಿದ್ದಾರೆ. ದಾಳಿಯ ವೇಳೆ ಅಧ್ಯಕ್ಷರು ಭವನದಲ್ಲಿರಲಿಲ್ಲ ಎನ್ನಲಾಗಿದೆ.ಬೆಜಿ ಕೇಡ್ ಟ್ಯುನಿಶಿಯ ನೂತನ ಪ್ರಧಾನಿ

ಟ್ಯುನಿಸ್, (ಎಎಫ್‌ಪಿ): ಟ್ಯುನೀಶಿಯಾದ ಪ್ರಧಾನಿಯಾಗಿ ಮಾಜಿ ಸಚಿವ ಬೆಜಿ ಕೇಡ್ ಎಸ್ಸೆಬ್ಸಿ ಅವರನ್ನು ನೇಮಕ ಮಾಡಲಾಗಿದೆ ಎಂದು ಮಧ್ಯಂತರ ಅವಧಿಯ ಅಧ್ಯಕ್ಷ ಫೌಯಿದ್ ಮೆಬಾಜಾ ತಿಳಿಸಿದ್ದಾರೆ.ಈಜಿಪ್ಟ್ ಅಧ್ಯಕ್ಷ ಸ್ಥಾನದ ಮೇಲೆ ಅಮರ್ ಕಣ್ಣು

ಕೈರೋ, (ಎಎಫ್‌ಪಿ): ಈಜಿಪ್ಟ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ತಾನು ಬಯಸುವುದಾಗಿ ಅರಬ್ ಲೀಗ್ ಮುಖ್ಯಸ್ಥ ಅಮರ್ ಮುಸ್ಸಾ ಹೇಳುವ ಮೂಲಕ ಈಜಿಪ್ಟ್ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿದ್ದಾರೆ ಎಂದು ಅಮರ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry