ಗುರುವಾರ , ಸೆಪ್ಟೆಂಬರ್ 19, 2019
26 °C

ವಿದೇಶ ಸಂಕ್ಷಿಪ್ತ ಸುದ್ದಿಗಳು

Published:
Updated:

ಹಡಗು ಮುಳುಗಿ 190 ಜನರ ಸಾವು

ಡೊಡೊಮಾ (ಐಎಎನ್‌ಎಸ್):
ತಾಂಜಾನಿಯಾದ ಜಂಜಿಬಾರ್ ದ್ವೀಪಕ್ಕೆ ಸಮೀಪ ಶನಿವಾರ ಹಡಗು ಅಪಘಾತಕ್ಕೀಡಾಗಿ 190 ಜನ ಸಾವನ್ನಪ್ಪಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ಶುಕ್ರವಾರ ರಾತ್ರಿ ಜಂಜಿಬಾರ್‌ನಿಂದ ಪೆಂಬಾ ದ್ವೀಪಕ್ಕೆ ಹೊರಟಿದ್ದ ಹಡಗು ಶನಿವಾರ ನುಂಗಾವಿ ಪ್ರದೇಶದಲ್ಲಿ ಮಗುಚಿ ಬಿದ್ದು ಈ ದುರ್ಘಟನೆ ಸಂಭವಿಸಿದೆ.ನೈಜೀರಿಯಾ: ಮುಂದುವರಿದ ಘರ್ಷಣೆ

ಅಬುಜಾ (ಪಿಟಿಐ):
ನೈಜೀರಿಯಾದ ಜೋಸ್ ನಗರದಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳ ಜನರ ನಡುವೆ ಘರ್ಷಣೆ ಮುಂದುವರಿದಿದ್ದು, ಈಗಾಗಲೇ 13 ಮಂದಿ ಸಾವನ್ನಪ್ಪಿದ್ದು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಆಫ್ಘಾನಿಸ್ತಾನ: ಸ್ಫೋಟಕ್ಕೆ 10 ಜನ ಬಲಿ

ಕಾಬೂಲ್ (ಎಪಿ):
ರಸ್ತೆಬದಿಯಲ್ಲಿ ಎರಡು ಪ್ರತ್ಯೇಕ ಬಾಂಬ್‌ಗಳು ಸ್ಫೋಟವಾಗಿ 10 ಜನ ಸಾವನ್ನಪ್ಪಿರುವ ಘಟನೆ ಆಫ್ಘಾನಿಸ್ತಾನದಲ್ಲಿ ನಡೆದಿದೆ.  ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಬರ್ಮಲ್ ಜಿಲ್ಲೆಯ ರಸ್ತೆ ಬದಿಯಲ್ಲಿ ಶನಿವಾರ ರಾತ್ರಿ ಈ ಸ್ಫೋಟ ಸಂಭವಿಸಿದೆ.ಸುನಾಮಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ

ಮಿನಾಮಿಸ್ಯಾನ್‌ರಿಕು/ಜಪಾನ್:
ಆರು ತಿಂಗಳ ಹಿಂದೆ ಸುನಾಮಿಯಲ್ಲಿ ಮಡಿದವರಿಗೆ ಭಾನುವಾರ ಇಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸುಮಾರು 2 ಸಾವಿರಕ್ಕೂ ಹೆಚ್ಚು ಜನ ಒಂದೆಡೆ ಸೇರಿ ಕೆಲಕ್ಷಣ ಮೌನ ಆಚರಿಸಿದರು. ಮಾರ್ಚ್‌ನಲ್ಲಿ ಸುನಾಮಿಯಿಂದ 900 ಜನ ಸಾವಿಗೀಡಾಗಿದ್ದರು. ಮತ್ತು ನಗರದಲ್ಲಿನ ಶೇ. 60ರಷ್ಟು ಕಟ್ಟಡಗಳಿಗೆ ಹಾನಿಯಾಗಿತ್ತು.ಸಾವಿನ ವದಂತಿ ತಮಾಷೆ ವಿಷಯ: ಕ್ಯಾಸ್ಟ್ರೊ

ಕ್ಯಾರಕಾಸ್ (ಐಎಎನ್‌ಎಸ್):
`ನನ್ನ ಸಾವಿನ ಬಗ್ಗೆ ಕೆಲವರು ವದಂತಿ ಹಬ್ಬಿಸುತ್ತಿರುವುದು ತಮಾಷೆಯ ವಿಷಯ~ ಎಂದು ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೊ ತಿಳಿಸಿದ್ದಾರೆ.`ಕಳೆದ ಎರಡು ತಿಂಗಳಿಂದ `ರಿಫ್ಲೆಕ್ಷನ್ಸ್~ ಪುಸ್ತಕದ ಬರವಣಿಗೆಯನ್ನು ನಿಲ್ಲಿಸಿದ್ದೇನೆ. ನನಗೆ ಸಮಯ ವ್ಯರ್ಥ ಮಾಡುವುದು ಇಷ್ಟವಿಲ್ಲ. ಹೀಗಾಗಿ ಅತಿ ಮಹತ್ವದ ಉಪಯೋಗಕಾರಿ ಕೆಲಸದಲ್ಲಿ ಸಂತೋಷದಿಂದ ನಿರತನಾಗಿದ್ದೇನೆ~ ಎಂದು ಅವರು ಹೇಳಿದ್ದಾರೆ. ಕ್ಯಾಸ್ಟ್ರೊ ಅವರ ಧ್ವನಿ ಮುದ್ರಿಕೆಯನ್ನು ವೆನಿಜುವೆಲಾದ ರಾಷ್ಟ್ರೀಯ ದೂರದರ್ಶನ ಪ್ರಸಾರ ಮಾಡಿದೆ.ಚೀನಾದಲ್ಲಿ ಭೂಕಂಪ

ಬೀಜಿಂಗ್ (ಪಿಟಿಐ):
ಚೀನಾದ ರುಯಚಾಂಗ್ ನಗರ ಸೇರಿದಂತೆ ಹಲವು ಭಾಗಗಳಲ್ಲಿ ಭಾನುವಾರ ಭೂಕಂಪ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.6 ದಾಖಲಾಗಿದ್ದು, 17 ಕಿ.ಮೀ ಭೂಮಿಯ ಆಳ ಭೂಕಂಪದ ಕೇಂದ್ರಾಗಿತ್ತು. ಯಾವುದೇ ರೀತಿಯ ಹಾನಿ ಉಂಟಾಗಿಲ್ಲ.

 

Post Comments (+)