ವಿದೇಶ; ಸಂಕ್ಷಿಪ್ತ ಸುದ್ದಿ

7

ವಿದೇಶ; ಸಂಕ್ಷಿಪ್ತ ಸುದ್ದಿ

Published:
Updated:

ಅಬು ಹಮ್ಜಾ ಕೋರ್ಟ್‌ಗೆ ಹಾಜರು

ನ್ಯೂಯಾರ್ಕ್ (ಪಿಟಿಐ): ಭಯೋತ್ಪಾದನೆಯ ಆರೋಪಕ್ಕೆ ಗುರಿಯಾಗಿ ಬ್ರಿಟನ್‌ನಿಂದ ಅಮೆರಿಕಗೆ ಹಸ್ತಾಂತರವಾಗಿರುವ ಅಬು ಹಮ್ಜಾ ಅಲ್- ಮಸ್ರಿಯನ್ನು ಇಲ್ಲಿನ ನ್ಯಾಯಾಲಯಕ್ಕೆ ಶನಿವಾರ ಹಾಜರು ಪಡಿಸಲಾಯಿತು. ನ್ಯಾಯಾಲಯವು ಮಂಗಳವಾರದವರೆಗೆ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಆತನ ವಿರುದ್ಧ ಅ. 9ರಂದೇ ಅಧಿಕೃತವಾಗಿ ದೋಷಾರೋಪಪಟ್ಟಿ ದಾಖಲಾಗಲಿದೆ.ಅಪಹರಣದ ಮತ್ತು ಅಲ್ ಖೈದಾ ಸಂಘಟನೆಗೆ ಸಾಧನ- ಸಲಕರಣೆಗಳನ್ನು ಪೂರೈಕೆ ಮಾಡಿದ ಆರೋಪವನ್ನು ಹಮ್ಜಾ ವಿರುದ್ಧ ಮಾಡಲಾಗಿದೆ. ಬ್ರಿಟನ್‌ನಲ್ಲಿದ್ದ ಈತನನ್ನು ತನ್ನ ವಶಕ್ಕೆ ನೀಡುವಂತೆ ಅಮೆರಿಕ ಕೋರಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಅಮೆರಿಕಗೆ ಶನಿವಾರವಷ್ಟೇ ಕರೆತರಲಾಯಿತು.ತ್ರಿಲೋಚನ್ ಸಿಂಗ್ ಸಹಾನಿಗೆ ಗೌರವ

ಲಂಡನ್ (ಪಿಟಿಐ): ಮಾಜಿ ರಾಜತಾಂತ್ರಿಕ ಅಧಿಕಾರಿ, ಉದ್ಯಮಿ ತ್ರಿಲೋಚನ್ ಸಿಂಗ್ ಸಹಾನಿ ಅವರು ಭಾರತ ಮತ್ತು ಬ್ರಿಟನ್‌ಗೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ `ಪ್ರೈಡ್ ಆಫ್ ಇಂಡಿಯಾ~ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಭಾರತದ ರಾಯಭಾರ ಕಚೇರಿಯ ಹಿರಿಯ ಅಧಿಕಾರಿ ಎಸ್. ಎಸ್. ಸಿದ್ದು ಅವರು ಸಹಾನಿ ಅವರಿಗೆ ಪ್ರಶಸ್ತಿ ಪತ್ರ ಮತ್ತು ಚಿನ್ನದ ಪದಕವನ್ನು ನೀಡಿ ಗೌರವಿಸಿದರು. ಬ್ರಿಟನ್‌ನ ಪಂಜಾಬ್ ಸಮಾಜ ಈ ಕಾರ್ಯಕ್ರಮವನ್ನು ಏರ್ಪಡಿಸಿತ್ತು.ಟ್ವಿಟರ್‌ನಲ್ಲಿ ಕ್ಯಾಮೆರಾನ್

ಲಂಡನ್ (ಪಿಟಿಐ): ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮೆರಾನ್ ಅವರು ಜನಪ್ರಿಯ ಕಿರು ಬ್ಲಾಗಿಂಗ್ ತಾಣ ಟ್ವಿಟರ್‌ನಲ್ಲಿ ಖಾತೆ ತೆರೆದಿದ್ದಾರೆ. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಮುಖಂಡರಾಗಿ ದೇಶದ ನಾಗರಿಕರನ್ನು ತಲುಪುವ ಯತ್ನವಾಗಿ ಅವರು ಟ್ವಿಟರ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry