ವಿದ್ಯಾಗೆ ಶಾರುಖ್ ಜೊತೆಯಾಗುವಾಸೆ!

7

ವಿದ್ಯಾಗೆ ಶಾರುಖ್ ಜೊತೆಯಾಗುವಾಸೆ!

Published:
Updated:
ವಿದ್ಯಾಗೆ ಶಾರುಖ್ ಜೊತೆಯಾಗುವಾಸೆ!

ವಿದ್ಯಾಬಾಲನ್‌ಗೆ ಪ್ರಣಯ ಕತೆಯೊಂದರಲ್ಲಿ ಶಾರುಖ್ ಖಾನ್ ಜೊತೆ ನಟಿಸುವ ಆಸೆಯಂತೆ! ಎಲ್ಲ ಹುಡುಗಿಯರೂ ತಮ್ಮ ಜೀವನದಲ್ಲೊಬ್ಬ ರಾಜ್ ಇರಲಿ ಎಂದು ಬಯಸುತ್ತಾರೆ.ಅದೇ `ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ~ ಚಿತ್ರದಲ್ಲಿ ಶಾರುಖ್ ನಿರ್ವಹಿಸಿದ ಪಾತ್ರ. ಈಗಲೂ ಆ ಪಾತ್ರವೆಂದರೆ ಹೃದಯದಲ್ಲಿ ನದಿಯೊಂದು ಓಡುತ್ತದೆ~ ಎಂದೆಲ್ಲ ವಿದ್ಯಾ ಹೇಳಿದ್ದಾರೆ.ಅವರಿಗೆ ಪ್ರಣಯ ಕತೆ ಎಂದರೆ ನೆನಪಾಗುವುದೇ ರಾಜೇಶ್ ಖನ್ನಾ ಮತ್ತು ಶಾರುಖ್ ಖಾನ್ ಅಂತೆ! ಹಾಗೆ ಅಮೀರ್ ಖಾನ್, ಸಲ್ಮಾನ್ ಖಾನ್ ಜೊತೆಗೂ ನಟಿಸುವಾಸೆ ಇದೆಯಂತೆ.ಅಮೀರ್ ಖಾನ್ ಅವರ `ಸತ್ಯಮೇವ ಜಯತೆ~ ಕಾರ್ಯಕ್ರಮವನ್ನು ಅಮೀರ್ ಹೊರತು ಪಡಿಸಿದರೆ ಮತ್ಯಾರೂ ಮಾಡಲಾರರು ಎಂಬ ಮೆಚ್ಚುಗೆಯ ಮಾತನ್ನೂ ಆಡಿದ್ದಾರೆ. ವಿದ್ಯಾ ಬಾಲನ್ ಈವರೆಗೂ ಯಾವುದೇ ಖಾನ್‌ಗಳ ಜೊತೆಗೆ ನಟಿಸಿಲ್ಲ.ಅಭಿಷೇಕ್ ಬಚ್ಚನ್ ಜೊತೆಗಿನ ನಟನೆ ಇವರಿಗೆ ಖುಷಿ ಕೊಡುತ್ತದೆಯಂತೆ. `ಪಾ~ ಚಿತ್ರದಲ್ಲಿ ಅಭಿ ಜೊತೆಗೆ ಕೆಲಸ ಮಾಡಿದ್ದು ಅನನ್ಯ ಅನುಭವ ಎನ್ನುವುದು ವಿದ್ಯಾ ಮೆಚ್ಚುಗೆ. ಇವರನ್ನು ಹೊರತು ಪಡಿಸಿದರೆ ಹೃತಿಕ್ ರೋಷನ್ ಜೊತೆಗೂ ಕೆಲಸ ಮಾಡುವಾಸೆಯಂತೆ.ಒಂದೊಂದೇ ಹೆಸರನ್ನು ಬಿಚ್ಚಿಡುತ್ತ ಹೋದ ವಿದ್ಯಾ ಕೊನೆಗೆ ಹೇಳಿದ್ದು ಒಳ್ಳೆಯ ನಟ ಹಾಗೂ ನಿರ್ದೇಶಕರೊಂದಿಗೆ ಕೆಲಸ ಮಾಡುವ ಆಸೆ ಇದೆ ಅಂತ ತಮ್ಮ ಪಟ್ಟಿಗೆ ಪೂರ್ಣವಿರಾಮ ಇರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry