ವಿದ್ಯಾಭವನದಿಂದ ಕಂಪ್ಯೂಟರ್‌ ತರಬೇತಿ

7

ವಿದ್ಯಾಭವನದಿಂದ ಕಂಪ್ಯೂಟರ್‌ ತರಬೇತಿ

Published:
Updated:

ಬೆಂಗಳೂರು: ಭಾರತೀಯ ವಿದ್ಯಾ­ಭವನದಿಂದ ಗಾಂಧಿ ಕಂಪ್ಯೂಟರ್ ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಕೇಂದ್ರವನ್ನು ಆರಂಭಿಸಲಾಗಿದ್ದು, ಇದೇ 15ರಿಂದ ಕಾರ್ಯಾರಂಭ ಮಾಡಲಿದೆ.ಪ್ರಾರಂಭಿಕ ಹಂತದಲ್ಲಿ 15 ಕಂಪ್ಯೂಟರ್‌ಗಳ ಸಹಾಯದಿಂದ ತರಬೇತಿ ನೀಡಲಾಗುತ್ತದೆ. ಎರಡು ಬ್ಯಾಚ್‌ಗಳಲ್ಲಿ 30 ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯಲಿದೆ. ಪ್ರತಿ ಕೋರ್ಸ್ ಮೂರು ತಿಂಗಳ ಅವಧಿಯದ್ದಾಗಿದೆ. ಆಫೀಸ್‌ ಅಸಿಸ್ಟಂಟ್‌, ಅಕೌಂಟ್ಸ್‌ ಅಸಿಸ್ಟಂಟ್‌, ಡೆಸ್ಕ್‌ಟಾಪ್‌ ಪಬ್ಲಿ­ಷಿಂಗ್‌, ಹಾರ್ಡ್‌ವೇರ್‌ ಮೆಂಟೇ­ನನ್ಸ್‌ ಕೋರ್ಸ್‌ಗಳ ತರಬೇತಿ ನೀಡಲಾಗುವುದು. ಅಭ್ಯರ್ಥಿಗಳು ಕನಿಷ್ಠ ಪಿಯುಸಿ ಪಾಸಾಗಿರಬೇಕು.18ರಿಂದ 30 ವರ್ಷದೊಳಗಿನವರು ಆಗಿರಬೇಕು. ಹಿರಿಯ ನಾಗರಿಕರಿಗೆ ಬೇಸಿಕ್‌ ಕೋರ್ಸ್‌ ತರಬೇತಿ ನೀಡಲಾಗು­ತ್ತದೆ. ಹೆಚ್ಚಿನ ವಿವರಗಳಿಗೆ ಭಾರ­ತೀಯ ವಿದ್ಯಾಭವನ ಸಂಪರ್ಕಿಸ­ಬಹುದು: 22265746, 22267303

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry