ವಿದ್ಯಾಭ್ಯಾಸದ ಜತೆಗೆ ಮಾನವೀಯ ಮೌಲ್ಯ ಕಲಿಯಬೇಕು

7

ವಿದ್ಯಾಭ್ಯಾಸದ ಜತೆಗೆ ಮಾನವೀಯ ಮೌಲ್ಯ ಕಲಿಯಬೇಕು

Published:
Updated:

ಉಳ್ಳಾಲ: ವೈದ್ಯಕೀಯ ವಿದ್ಯಾರ್ಥಿಗಳು  ಶೈಕ್ಷಣಿಕ ಜೀವನದಲ್ಲಿ  ಜ್ಞಾನ ಸಂಪಾದನೆಯೊಂದಿಗೆ  ತಮ್ಮ ವ್ಯಕ್ತಿತ್ವ ವಿಕಸನ, ಉತ್ತಮ ನಡೆನುಡಿಯೊಂದಿಗೆ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವ ಕಾರ್ಯ ಮಾಡಬೇಕು ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎಂ.ಹೆಗ್ಡೆ ಅಭಿಪ್ರಾಯಪಟ್ಟರು.ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್. ಹೆಗ್ಡೆ ಸಭಾಂಗಣದಲ್ಲಿ ಶನಿವಾರ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ 13ನೇ ವಾರ್ಷಿಕೋತ್ಸವದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ವೈದ್ಯಕೀಯ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳೊಂದಿಗೆ ಗುರುತಿಸಿಕೊಳ್ಳುವ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವಂತಾಗಬೇಕು. ಈ ನಿಟ್ಟಿನಲ್ಲಿ ವೈದ್ಯ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ.ಎಂ.ಶಾಂತಾರಾಮ ಶೆಟ್ಟಿ, ವಿದ್ಯಾರ್ಥಿ ಕೌನ್ಸಿಲ್ ಮತ್ತು ಸಿಬ್ಬಂದಿ ಸಲಹೆಗಾರ ಪ್ರೊ.ಮಹಾಬಲೇಶ್ ಶೆಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry