`ವಿದ್ಯಾಭ್ಯಾಸವೇ ಸರ್ವಸ್ವ ಅಲ್ಲ'

7

`ವಿದ್ಯಾಭ್ಯಾಸವೇ ಸರ್ವಸ್ವ ಅಲ್ಲ'

Published:
Updated:

ಗದಗ: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಕಡಿಮೆ ಅಂಕ ಬಂದ ಕಾರಣಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಮಂಗಳೂರಿನ ರಾಮಕೃಷ್ಣ ಮಿಶನ್ ಅಧ್ಯಕ್ಷ ಜಿತ್‌ಕಾಮಾನಂದ ಸ್ವಾಮೀಜಿ ಹೇಳಿದರು.ನಗರದ ಕೆ.ಎಚ್.ಪಾಟೀಲ ಸಭಾಂ ಗಣದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜಯಂ ತ್ಯುತ್ಸವ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಫಲಿತಾಂಶ ಪ್ರಕಟಗೊಂಡ ಮಾರನೇ ದಿನ ಪತ್ರಿಕೆ ಓದಲು ಭಯವಾಗುತ್ತದೆ. ವಿದ್ಯಾರ್ಥಿಗಳ ಆತ್ಮಹತ್ಯೆ ಸುದ್ದಿಗಳು ಮನಸ್ಸಿಗೆ ನೋವು ಉಂಟು ಮಾಡುತ್ತದೆ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಹೆದರಬೇಕಾಗಿಲ್ಲ. ವಿದ್ಯಾಭ್ಯಾಸವೇ ಸರ್ವಸ್ವ ಅಲ್ಲ. ಜೀವನದಲ್ಲಿ ಕಲಿ ಯುವುದು ಸಾಕಷ್ಟು ಇದೆ ಎಂಬುದಕ್ಕೆ ಅಂಬಿಗ ಮತ್ತು ಮೂವರು ಫ್ರೊಫೆಸರ್‌ಗಳ ಕಥೆಯನ್ನು ಉದಾಹರಣೆಯಾಗಿ ಹೇಳಿದರು.ಜೀವನ ಎನ್ನುವ ನದಿಯಲ್ಲಿ ಈಜುವುದನ್ನು ಕಲಿಯಬೇಕು. ಮುಂದಿನ ಜೀವನ ತಯಾರು ಮಾಡುವ ವಿದ್ಯಾಭ್ಯಾಸ ಇಂದಿನ ಮಕ್ಕಳಿಗೆ ಅಗತ್ಯವಿದೆ. ಮನಸ್ಸಿನ ಏಕಾಗ್ರತೆಯಿಂದ ಬಹುತೇಕ ಮಂದಿ ಜೀವನದಲ್ಲಿ ಸಾಧನೆ ಮಾಡಿರುವ ನಿದರ್ಶನಗಳಿವೆ. ನಕರಾ ತ್ಮಕ ಯೋಚನೆಯಿಂದ ಮನಸ್ಸಿನ ಶಕ್ತಿ ಕುಂದಲಿದೆ. ಆದ್ದರಿಂದ ವಿದ್ಯಾರ್ಥಿ ಗಳು ಸಕರಾತ್ಮಕವಾಗಿ ಯೋಚನೆ ಮಾಡಿದರೆ ಸಾಧನೆ ಮಾಡಲು ಸಾಧ್ಯವಾಗಲಿದೆ. ಇದಕ್ಕಾಗಿ ವಿವೇಕಾನಂದರ ಜೀವನ ಮತ್ತು ಸಂದೇಶ ಕುರಿತ ಪುಸ್ತಗಳನ್ನು ಓದಬೇಕು ಎಂದು ಸಲಹೆ ನೀಡಿದರು.ನಗರದ ವಿವಿಧ ಶಾಲೆಯ ನೂರಾರು ಮಕ್ಕಳು ಸಮಾವೇಶದಲ್ಲಿ ಭಾಗ ಹಿಸಿದ್ದರು. ಎಲ್ಲರಿಗೂ ವಿವೇಕಾನಂದರ ಜೀವನ ಮತ್ತು ಸಂದೇಶ ಕುರಿತ ಪುಸ್ತಕವನ್ನು ಉಚಿತವಾಗಿ ನೀಡಲಾಯಿತು.ಐಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣ ರಾದ ರವಿ ಚನ್ನಣ್ಣವರನ್ನು ಸನ್ಮಾನಿಸ ಲಾಯಿತು. ಸಮಾವೇಶದಲ್ಲಿ ಗದುಗಿನ ನಿರ್ಭಯಾನಂದಜೀ, ಹುಬ್ಬಳ್ಳಿಯ ರಘುವೀರಾನಂದಜೀ, ಜಗನಾಥಂದಜೀ, ಮಾಜಿ ಸಚಿವ ಎಚ್.ಕೆ.ಪಾಟೀಲ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry