ಮಂಗಳವಾರ, ನವೆಂಬರ್ 19, 2019
27 °C

ವಿದ್ಯಾರ್ಥಿಗಳತ್ತ ಆಕಾಂಕ್ಷಿಗಳ ಚಿತ್ತ

Published:
Updated:

ಚಿಂತಾಮಣಿ: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮೀಪ ಪಕ್ಷೇತರ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್ ಬೆಂಬಲಿಗರು ಬುಧವಾರ ವಿದ್ಯಾರ್ಥಿಗಳತ್ತ ತಮ್ಮ ಚಿತ್ತ ಹರಿಸಿದ್ದರು.ಎಪಿಎಂಸಿ ಮಾಜಿ ನಿರ್ದೇಶಕ ಸಾದಲಿ ಶ್ರೀನಿವಾಸ್ ಮಾತನಾಡಿ, ಸುಧಾಕರ್ ವಿದ್ಯಾಭ್ಯಾಸ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಮಹಾತ್ಮ ಗಾಂಧಿ ಪ್ರೌಢಶಾಲೆ ಕಟ್ಟಡ ಯಾವುದೇ ಖಾಸಗಿ ಕಾಲೇಜಿಗಿಂತ ಕಡಿಮೆ ಇಲ್ಲ. ಮಹಿಳಾ ಕಾಲೇಜಿಗೆ ಮೊದಲ ಹಂತದಲ್ಲಿ ಒಂದು ಕೋಟಿ, ನಂತರ 2 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿಸಿದ್ದರು ಎಂದು ಹೇಳಿದರು.ನಗರದಲ್ಲಿ ಅನೇಕ ಸಾಮರ್ಥ್ಯಸೌಧ ಸೇರಿದಂತೆ ಅನೇಕ ಕಾಮಗಾರಿಗಳು ಬಾಕಿ ಉಳಿದಿವೆ. ಎಲ್ಲ ಕಾಮಗಾರಿಗಳನ್ನು ಮುಗಿಸಲು ಮತ್ತೊಮ್ಮೆ ಡಾ.ಎಂ.ಸಿ.ಸುಧಾಕರ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.ಎಪಿಎಂಸಿ ನಿರ್ದೇಶಕ ಚಲಣ್ಣ, ನಗರಸಭೆ ಸದಸ್ಯ ಭಾಸ್ಕರ್, ಮುಖಂಡರಾದ ಬೂರಗಮಾಕಲಹಳ್ಳಿ ಮಂಜುನಾಥ್, ಸ್ವಾತಿ ಹರಿ, ಡಿಷ್ ಅಶ್ವತ್ಥರೆಡ್ಡಿ, ಕಳಾಯಿ ಶ್ರೀನಿವಾಸ್, ರಘುನಾಥಗೌಡ, ನಾಯ್ಡು ಸೀನಪ್ಪ, ವಿಜಯ್‌ಕುಮಾರ್, ಆಲವಾಟ ಎ.ಎಸ್.ಮಂಜುನಾಥ್ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)