ಭಾನುವಾರ, ಡಿಸೆಂಬರ್ 8, 2019
25 °C
ಮಾತಾ ಅಮೃತಾನಂದಮಯಿ 60ನೇ ಜನ್ಮದಿನಾಚರಣೆ

ವಿದ್ಯಾರ್ಥಿಗಳಿಂದ ಕಡಲತೀರ ಸ್ವಚ್ಛ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿಗಳಿಂದ ಕಡಲತೀರ ಸ್ವಚ್ಛ

ಕಾರವಾರ: ಮಾತಾ ಅಮೃತಾನಂದಮಯಿ (ಅಮ್ಮ) ಅವರ 60ನೇ ಜನ್ಮದಿನದ ಅಂಗವಾಗಿ ತಾಲ್ಲೂಕಿನ ಸದಾಶಿವಗಡದ ಅಮೃತಾ ವಿದ್ಯಾಲಯದ ವಿದ್ಯಾರ್ಥಿಗಳು ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯ ನಡೆಸಿದರು.ಸೆ. 27-28ರಂದು ಕೇರಳದ ಅಮೃತಪುರಿಯಲ್ಲಿ ಅಮ್ಮನ ಜನ್ಮದಿನಾಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಸೆ. 1ರಂದು `ಅಮಲ ಭಾರತ ಶುಚಿತ್ವ ಆಂದೋಲನ'ವನ್ನು ಹಮ್ಮಿಕೊಂಡಿದ್ದು, ನಗರದಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಡಲತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ಗಳನ್ನು ಆಯ್ದು ಕಸದಬುಟ್ಟಿಗೆ ತುಂಬಿದರು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಸ್ವಚ್ಛತೆ ಕಾರ್ಯಕ್ರಮದ ಬಳಿಕ ರಕ್ತದಾನ ಶಿಬಿರ ನಡೆಯಿತು. ನಂತರ ನಗರದ ಆಶಾನಿಕೇತನ ಕಿವುಡು ಮತ್ತು ಮೂಗ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.600 ಸಸಿಗಳ ವಿತರಣೆ: ಮಾತಾ ಅಮೃತಾನಂದಮಯಿ ಹುಟ್ಟುಹಬ್ಬ ಆಚರಣಾ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಹಾಗೂ ಭಕ್ತರಿಗೆ 600 ಸಸಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಶಾಸಕ ಸತೀಶ ಸೈಲ್ ಉದ್ಘಾಟಿಸಿದರು. ಮಾಜಿ ಶಾಸಕ ಗಂಗಾಧರ ಭಟ್, ಮಾಧವ ನಾಯ್ಕ, ಬಿ.ಪಿ. ರಾಣೆ, ಅಶೋಕ ಆಚಾರಿ, ಡಾ.ಕದಂ, ಅಂಜಲಿ ಮಾನೆ ಮತ್ತಿತತರು ಹಾಜರಿದ್ದರು.

ಪ್ರತಿಕ್ರಿಯಿಸಿ (+)