ಭಾನುವಾರ, ಏಪ್ರಿಲ್ 18, 2021
31 °C

ವಿದ್ಯಾರ್ಥಿಗಳಿಂದ ನೇಜಿ ನಾಟಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಟ್ಲ: ಸಾವಯವದಿಂದಲೂ ಉತ್ತಮ ಬೆಳೆ ಪಡೆಯಬಹುದು ಮತ್ತು ಪ್ರತಿ-ಯೊಬ್ಬರೂ ಸಾವಯವ ಕೃಷಿ ಮಾಡುವುದರಿಂದ ಉತ್ತಮ ಆರೋಗ್ಯದಿಂದ ಇರಲು ಸಾಧ್ಯ ಎಂದು ಸಾವಯವ ಕೃಷಿಕ ಕೃಷ್ಣಪ್ಪ ಪುರುಷ ಹೇಳಿದರು.ಬಂಟ್ವಾಳ ತಾಲ್ಲೂಕು ನೇತ್ರಾವತಿ ಸಾವಯವ ಕೃಷಿ ಪರಿವಾರ ಆಶ್ರಯದಲ್ಲಿ ಮಂಗಳವಾರ ವಿಟ್ಲ ಸಮೀಪದ ಕೇಪು ಕಲ್ಲಂಗಳ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಡೆದ ಕೃಷಿ ಮಾಹಿತಿ ಮತ್ತು ನೇಜಿ ನಾಟಿ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬತ್ತ ಬಿತ್ತನೆ ಮಾಡುವ ಮೊದಲು ಬೀಜವನ್ನು 12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಹನ್ನೆರಡು ಗಂಟೆ  ಕಳೆದ ಮೇಲೆ ಸೆಗಣಿ ಕೊಡುವ ಕೆಲಸ ಮಾಡಿ ಗಟ್ಟಿಯಾಗಿ ಕಟ್ಟಿ ಇಡಬೇಕು. ಮರುದಿನ ಮೊಳಕೆ ಬಂದ ಮೇಲೆ ಬಿತ್ತನೆ ಮಾಡಿ 10ರಿಂದ 17 ದಿನಗಳಲ್ಲಿ ನೇಜಿ ಗಟ್ಟಿಯಾದ ನಂತರ ನಾಟಿ ಮಾಡಬೇಕು ಎಂದು ವಿವರಿಸಿದರು.ಕೇಪು ಕಲ್ಲಂಗಳ ಸರ್ಕಾರಿ ಪ್ರೌಢ ಶಾಲೆಯ ಒಂಬತ್ತನೇ ತರಗತಿಯ 63 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಬಂಟ್ವಾಳ ತಾಲ್ಲೂಕು ನೇತ್ರಾವತಿ ಸಾವಯವ ಕೃಷಿ ಪರಿವಾರ ಅಧ್ಯಕ್ಷ ಲಕ್ಷ್ಮೀನಾರಾಯಣ ಪರಾಡ್ಕರ್, ಕಾರ್ಯದರ್ಶಿ ರಾಮಕಿಶೋರ್ ಮಂಚಿ, ವಿಭಾಗ ಸಂಚಾಲಕ ಪ್ರವೀಣ ಸರಳಾಯ, ಕೋಶಾಧಿಕಾರಿ ದಿವಾಕರ ಶೆಟ್ಟಿ ಕುಪ್ಪಿಲ, ತಾಲ್ಲೂಕು ಸಂಚಾಲಕ ನರಸಿಂಹ ರಾವ್ ದೇವಸ್ಯ ಮೂಡೂರು, ನಿರ್ದೇಶಕ ಮೋಹನ್ ಆಚಾರ್ಯ ಕಾವಳಪಡೂರು, ಪ್ರಕಾಶ್ ರಾವ್ ನಯನಾಡು, ಪುರಂದರ ಪೆರುವಾಯಿ, ತನಿಯಪ್ಪ ಅನಂತಾಡಿ, ಶಾಲಾ ಶಿಕ್ಷಕರಾದ ಲಕ್ಷ್ಮಣ್ ಟಿ ನಾಯಕ್, ಹರ್ಷೇಂದ್ರ ಶೆಟ್ಟಿ, ಜಯ ಪಿ, ಗೌರಿದೇವಿ, ಗೀತಾ ಕೆ, ಲಲಿತಾ ಕೆ  ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.