ಗುರುವಾರ , ಮೇ 13, 2021
34 °C

ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಂಧ್ರಪ್ರದೇಶ ಮೂಲದ `ಶ್ರೀ ಕಾಶಿ ಅನ್ನಪೂರ್ಣ ವಾಸವಿ ಆರ್ಯ ವೈಶ್ಯ ವೃದ್ಧಾಶ್ರಮ ಮತ್ತು ನಿತ್ಯಾನ್ನ ಸತ್ರಂ~ ಸಂಸ್ಥೆಯು ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಒಂದು ಕೋಟಿ ರೂಪಾಯಿ ಮೊತ್ತದ ಆರ್ಥಿಕ ನೆರವು ನೀಡಲಿದೆ.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಜಕ್ಕ ನಾಗಭೂಷಣಂ ಮಾತನಾಡಿ, `ದೇಶದಾದ್ಯಂತ ಒಟ್ಟು 1800 ವಿದ್ಯಾರ್ಥಿಗಳಿಗೆ ಸುಮಾರು ರೂ ಆರು ಕೋಟಿ  ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಿದ್ದು, ರಾಜ್ಯದಲ್ಲಿಯೂ ಈ ನೆರವನ್ನು ನೀಡಲಾಗುವುದು.

 

ಆರ್ಯ ವೈಶ್ಯ ಹಾಗೂ ಇತರೆ ಜನಾಂಗದ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಗುವುದು. ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಬೆಂಗಳೂರಿನಲ್ಲಿ ಸೆ.25ರಂದು (ಭಾನುವಾರ) ನಡೆಯಲಿದೆ.

ತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ ಅವರು ವಿದ್ಯಾರ್ಥಿ ವೇತನ ವಿತರಿಸಲಿದ್ದಾರೆ~ ಎಂದರು.ಸಂಸ್ಥೆಯ ಕರ್ನಾಟಕ ಘಟಕದ ಸಲಹೆಗಾರ ಮಾನಂದಿ ನಂಜುಂಡ ಶೆಟ್ಟಿ ಮಾತನಾಡಿ, `ರಾಜ್ಯದಲ್ಲಿ ಕೆಲ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನ ವಿತರಣೆಗಾಗಿ ಈಗಾಗಲೇ ಆಯ್ಕೆ ಮಾಡಲಾಗಿದೆ. ಆದರೂ ಈ ನೆರವನ್ನು ಪಡೆಯುವ ಆಕಾಂಕ್ಷಿಗಳಿದ್ದಲ್ಲಿ ಈಗಲೂ ಅರ್ಜಿ ಸಲ್ಲಿಸಬಹುದು. ಕಾರ್ಯಕ್ರಮ ನಡೆಯುವ ಜಯನಗರದ ಎನ್‌ಎಂಕೆಆರ್‌ವಿ ಕಾಲೇಜಿಗೆ ಭಾನುವಾರವೂ ತಮ್ಮ ಪ್ರಮಾಣಪತ್ರದೊಂದಿಗೆ ಹಾಜರಾಗಬಹುದು~ ಎಂದು ಹೇಳಿದರು.`ತಂದೆ-ತಾಯಿ ಇಲ್ಲದ ಅಂಗವಿಕಲ ವಿದ್ಯಾರ್ಥಿಗಳೂ ಆರ್ಥಿಕ ನೆರವಿಗೆ ಅರ್ಜಿ ಸಲ್ಲಿಸಬಹುದು~ ಎಂದು ಹೇಳಿದರು. ಅರ್ಜಿಯನ್ನು  ವೆಬ್‌ಸೈಟ್‌ನಿಂದಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು.ಹೆಚ್ಚಿನ ವಿವರಗಳಿಗೆ ಕಾರ್ಯಕ್ರಮ ಸಂಯೋಜಕ ಶಶಿಧರ್ ಆರ್.ಎಸ್. (98450 07960) ಅವರನ್ನು ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.